ಭಟ್ಕಳ(BHATKAL) : ಗ್ರಾಮಾಂತರ ವೃತ್ತದ ಮಂಕಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ(MANKI POLICE STATION) ಕಳ್ಳತನ ಮಾಡಿದ ಇಬ್ಬರು ಕಳ್ಳರನ್ನ ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ.
ಭಟ್ಕಳ ಕಿಡ್ವಾಯಿ ರಸ್ತೆಯ ನಿವಾಸಿ ಮೊಹಮ್ಮದ ರಾಹಿಕ್ ತಂದೆ ಮೊಹಮ್ಮದ ಗೌಸ್ (23) ಕುಂದಾಪುರ ಮೂಲದ ಶಪಾದ ತಂದೆ ಮಹಮ್ಮದ ಗೌಸ್ (18) ಬಂಧಿತರಾಗಿದ್ದಾರೆ.
ಸೆಪ್ಟೆಂಬರ್ 19 ರಂದು ಶ್ರೀಪಾದ ಮಂಜುನಾಥ ನಾಯ್ಕ, ಮಂಕಿ ಮಾವಿನಕಟ್ಟಾದ ಗಣೇಶ ಕಾಂಪ್ಲೆಕ್ಸ್‌ನಲ್ಲಿರುವ ಎಸ್.ಎಂ.ಪಿ. ಅರ್ಗಿಕಲ್ಲರ್ ಮಷಿನ್ ಮತ್ತು ಪವರ್ ಟೂಲ್ಸ್ ಅಂಗಡಿಗೆ ಹಾಕಿದ್ದ ಶೆಟರ್ಸ್ ಲಾಕ್ ಮತ್ತು ಶೆಟರ್ಸ್‌ನ್ನು ಯಾವುದೋ ಗಟ್ಟಿಯಾದ ವಸ್ತುವಿನಿಂದ ಮೀಟಿ ಮುರಿದು, ಅಂಗಡಿಯ ಒಳಗೆ ಕಳ್ಳತನ ಮಾಡುವ ಉದ್ದೇಶದಿಂದ ಪ್ರವೇಶಿಸಿ. ಅಂಗಡಿಯಲ್ಲಿದ್ದ ಅಂದಾಜು 6,000/-ರೂಪಾಯಿ ಮೌಲ್ಯದ 02 ಕ್ಲಿಪ್ ಹಾಟ್ ಎರ್‌ಗನ್ ಮಷಿನ್ ಗಳನ್ನು ಕಳ್ಳತನ ಮಾಡಿದ್ದರು. ಅಲ್ಲದೇ ಅಂಗಡಿಯ ಪಕ್ಕದಲ್ಲಿ ನಿಲ್ಲಿಸಿಟ್ಟಿದ್ದ ಮಂಕಿ ಅನಂತವಾಡಿಯ ಕೃಷ್ಣಾ ತಿಮ್ಮೆಗೌಡರ ಟಿಪ್ಪರ್ ಮತ್ತು ಜೆ.ಸಿ.ಬಿ. ಯ 27 ಸಾ. ರೂಪಾಯಿ ಮೌಲ್ಯದ ಆಕ್ಸಿಡ್ ಕಂಪನಿಯ 02 ಬ್ಯಾಟರಿಗಳನ್ನು ಕಳ್ಳತನ ಮಾಡಿದ್ದರು.
ಪ್ರಕರಣ ದಾಖಲಿಸಿಕೊಂಡ ಮಂಕಿ ಠಾಣೆ ಪೊಲೀಸರು ಕಳ್ಳತನವಾದ ಆಕ್ಸಿಡ್ ಕಂಪನಿಯ ಬ್ಯಾಟರಿ-02 ಮತ್ತು ಕೃತ್ಯಕ್ಕೆ ಬಳಸಿದ ಮಾರುತಿ ಕಂಪನಿಯ ಸ್ಪಷ್ಟ ಕಾರ್ ಮತ್ತು ಕಬ್ಬಿಣದ ರಾಡ-01 ಇವುಗಳನ್ನು ಜಪ್ತು ಮಾಡಿ ಆರೋಪಿತರನ್ನ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಇದನ್ನು ಓದಿ : ಆಪರೇಷನ್ ಗಂಗಾವಳಿ ಆರಂಭ