ಭಟ್ಕಳ(BHATKAL): ಅಭಿವೃದ್ಧಿಗೆ ಬಂದ ಅನುದಾನದಲ್ಲಿ ತಾರತಮ್ಯ ಮಾಡಿರುವುದನ್ನ ವಿರೋಧಿಸಿ ಜಾಲಿ ಪಟ್ಟಣ ಪಂಚಾಯತ್(JALI PATTANA PANCHAYAT) ನ ಕೆಲ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.
ವಾರ್ಡ್ ನಂಬರ್ 9 ದೇವಿನಗರ, ವಾರ್ಡ್ ನಂಬರ್ 2 ಕಾರಗದ್ದೆ, ವಾರ್ಡ್ ನಂಬರ್ 8 ದೊಡ್ಮನೆ ಭಾಗದ ಸದಸ್ಯರು ಪ್ರತಿಭಟನೆ ನಡೆಸಿದವರು. ಸರ್ಕಾರದಿಂದ ಪಟ್ಟಣ ಪಂಚಾಯತ್ ಗೆ ಬಂದ ಅನುದಾನವನ್ನ ಕಡು ಬಡವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಜನರೆ ಅಧಿಕವಾಗಿರುವ ವಾರ್ಡಿಗೆ ನೀಡದೆ ಅನ್ಯಾಯ ಮಾಡಲಾಗಿದೆ. ಇದನ್ನು ಖಂಡಿಸಿ ಮೂವರು ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.
2023 ಹಾಗೂ 2024 ಸಾಲಿನಲ್ಲಿ ಸಾಲು ಸಾಲು ಅನುದಾನಗಳು ಬಿಡುಗಡೆಯಾಗಿದ್ದು ಲಕ್ಷ ಲಕ್ಷ ವೆಚ್ಚದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಆದರೆ ಬಿಜೆಪಿ ಸದಸ್ಯರು ಇರುವ ನಮ್ಮ ಮೂರು ವಾರ್ಡನ್ನು ಬಿಟ್ಟು ಉಳಿದ ಎಲ್ಲಾ ವಾರ್ಡಿಗೂ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸದಸ್ಯರು ಆರೋಪಿಸಿದ್ದಾರೆ. ಬಿಜೆಪಿಯ ಬೆಂಬಲಿತ ಅಭ್ಯರ್ಥಿಗಳೆಂದು ನಮ್ಮನ್ನು ಪರಿಗಣಿಸಿ ಈ ಅನುದಾನದಲ್ಲಿ ತಾರತಮ್ಯ ಮಾಡುತ್ತಿರುವುದು ಕಾನೂನಿಗೆ ವಿರುದ್ಧವಾಗಿದೆ. ಹೀಗಾಗಿ ಎಲ್ಲಾ ವಾರ್ಡಿಗೂ ಸಮನಾಗಿ ಅನುದಾನ ಹಂಚಿಕೆ ಮಾಡಿ ನ್ಯಾಯ ಒದಗಿಸುವ ಕೆಲಸ ಮಾಡಬೇಕೆಂದು ತಹಶೀಲ್ದಾರ್ ಅವರಿಗೆ ಮನವಿ ಮಾಡಿದ್ದಾರೆ.
ಇದನ್ನು ಓದಿ : ಬಿಜೆಪಿ ಬಣಗಳ ನಡುವೆ ಮಾರಾಮಾರಿ