ಕಾರವಾರ(Karwar) : ತದಡಿಯಲ್ಲಿ ಅನಧಿಕೃತವಾಗಿ ಬೋಟಿಂಗ್(Illegal boating) ನಡೆಸುವವರಿಗೆ ಅವಕಾಶ ನೀಡಬಾರದೆಂದು ಓಂ ಬೀಚ್ ಟೂರಿಸ್ಟ್ ಅಸೋಸಿಯೇಷನ್ ಒತ್ತಾಯಿಸಿದೆ.

ಪ್ರವಾಸೋದ್ಯಮ ಇಲಾಖೆಯಿಂದ(Tourism Department) ಟೆಂಡರ್ ಕರೆದು ಈಗಾಗಲೇ ಹಲವು ಕುಟುಂಬಗಳು ಈ ಭಾಗದಲ್ಲಿ ಪ್ರವಾಸಿಗರ ಸುರಕ್ಷತೆಯನ್ನ(Tourist Saftey) ಗಮನಹರಿಸಿ ಸೇವೆ ನೀಡುತ್ತಿದ್ದಾರೆ. ಟೆಂಡರ್ ಪಡೆದವರು ಸಹ ನೂರಾರು ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಿದ್ದಾರೆ.  2020 ನೇ ಸಾಲಿನಲ್ಲಿ  ಕೋವಿಡ್(Covid) ಬಂದು ಮೊದಲ ಮೂರು ವರ್ಷ ಪ್ರವಾಸಿಗರ ಸಂಖ್ಯೆ ಕಡಿಮೆಯಿದ್ದರಿಂದ ಕ್ರೀಡಾ ಚಟುವಟಿಕೆ ಕಡಿಮೆಯಾಗಿ ಆರ್ಥಿಕವಾಗಿ ಭಾರಿ ನಷ್ಟವನ್ನು ಅನುಭವಿಸಿದ್ದೇವೆ. ತದ ನಂತರ ಪ್ರವಾಸೋದ್ಯಮ(Tourism) ಚೇತರಿಸಿಕೊಳ್ಳುತ್ತಿರುವ ಈ ಅವಧಿಯಲ್ಲಿ ಅನಧಿಕೃತ ಬೋಟ್ಗಳಿಂದ ನಮ್ಮ ಆದಾಯಕ್ಕೆ ಪೆಟ್ಟು ಬಿದ್ದಿರುತ್ತದೆಯೆಂದು ಅವರು ತಿಳಿಸಿದ್ದಾರೆ.

ಇದೀಗ ಬೆಲೆಖಾನ್(Belekhan), ಪ್ಯಾರಡೈಸ್(Paradais), ಹಾಫ್ ಮೂನ್ ಬೀಚುಗಳು(Halfmoon Beach) ಸಹ ಟೆಂಡರ್ ಪಡೆದವರ ನಿರಪೇಕ್ಷಣಾ ಪತ್ರದಲ್ಲಿ ಅವರ ವ್ಯಾಪ್ತಿಯಲ್ಲಿ ಸೇರಿಸಲಾಗಿದೆ. ಈ ಸ್ಥಳಗಳಿಗೆ ಯಾವುದೇ ಅನಧೀಕೃತ ವಿಹಾರಾರ್ಥಿ ಬೋಟುಗಳು ಪ್ರಯಾಣಿಕರನ್ನು ಕರೆದೊಯ್ಯುವಂತಿಲ್ಲ. ಆದರೆ ಈ ಹಿಂದೆ ಅನಧಿಕೃತವಾಗಿ ಕೆಲ ಬೋಟಿನವರು ಪ್ರವಾಸಿಗರನ್ನ ಒಯುತ್ತಿರುವುದು ಗಮನಕ್ಕೆ ಬಂದಿತ್ತು.

ಕಳೆದ 2023 ಅಕ್ಟೋಬರ್ ತಿಂಗಳಿನಲ್ಲಿ ತದಡಿ ಬಂದರು(Tadri Port) ವ್ಯಾಪ್ತಿಯಲ್ಲಿ ನಡೆದ ದುರ್ಘಟನೆಯಲ್ಲಿ ಅನಧಿಕೃತ ಬೋಟಿನ ಉದ್ಯೋಗಿಯೋರ್ವ ಗಂಭೀರ ಗಾಯಗೊಂಡಿದ್ದ.  ತದ ನಂತರ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯು(District Tourism Department) ಈ ಅನಧಿಕೃತ ವಿಹಾರಾರ್ಥಿ ಬೋಟುಗಳ ಚಟುವಟಿಕೆಯನ್ನು ತಡೆದಿದೆ. ಅವರ ಕ್ರಮವನ್ನು ಸ್ವಾಗತಿಸಿದ್ದೇವೆ.

2023 ನವೆಂಬರ್ ತಿಂಗಳಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳು ವೈದ್ಯ (Mankal Vaidya) ಅವರು ಟೆಂಡರ್ ದಾರರು ಹಾಗೂ ಅನಧಿಕೃತವಾಗಿ ಪ್ರವಾಸಿಗರನ್ನು ಹೊತ್ತೊಯ್ಯುವ ಬೋಟುದಾರರ ಮಧ್ಯೆ ಏರ್ಪಡಿಸಿದ ಸಂಧಾನದಲ್ಲಿ ಟೆಂಡರ್ದಾರರಲ್ಲದವರಲ್ಲಿ 7 ಬೋಟುಗಳಿಗೆ ನದಿಯ ಹಿನ್ನೀರಿನ(Back Water) ಪ್ರದೇಶದಲ್ಲಿ ಮಾತ್ರ ವಿಹಾರಾರ್ಥಿಗಳನ್ನು ಒಯ್ಯಬಹುದೇ ಹೊರತು ಟೆಂಡರ್ ಪಡೆದವರ ವ್ಯಾಪ್ತಿಯಲ್ಲಿರುವ ಪ್ಯಾರಡೈಸ್(Paradaise), ಹಾಫ್-ಮೂನ್(Halfmoon), ಓಂ(Om), ಕುಡ್ಲೆ(Kudle) ಹಾಗೂ ಗೋಕರ್ಣ ಬೀಚುಗಳಲ್ಲಿ(Gokarn Beach) ವಿಹಾರಾರ್ಥಿಗಳನ್ನು ಒಯುವಂತಿಲ್ಲ ಎಂದಿದ್ದರು.  ಒಂದು ವೇಳೆ ಅನಧಿಕೃತ ಬೋಟುಗಳು ಟೆಂಡರ್ ದಾರರ ವ್ಯಾಪ್ತಿಗೆ ಬಂದರೆ ಸದರಿ ಬೋಟುಗಳನ್ನು ಸೀಜ್ ಮಾಡುವುದೆಂದು ನಿರ್ಧರಿಸಲಾಗಿತ್ತು. ಆದರೂ ಸಹ ಅನಧಿಕೃತ ವಿಹಾರಾರ್ಥಿ ಬೋಟಿನವರು  15 ಜನ ಪ್ರಯಾಣ ಮಾಡಬಹುದಾದ ಬೋಟುಗಳಲ್ಲಿ 30-40 ರಷ್ಟು ವಿಹಾರಾರ್ಥಿಗಳನ್ನು ಕರೆದುಕೊಂಡು ಅಪಾಯಕಾರಿ ಸ್ಥಿತಿಯಲ್ಲಿ ಪ್ರಯಾಣಿಸುವುದು ಆತಂಕಕಾರಿಯಾಗಿದೆ.  ಇದರ ಪರಿಣಾಮ ಮೇ 2004 ರಲ್ಲಿ ತದಡಿ ದಕ್ಕೆಯಿಂದ 100 ಮೀಟರ್ ಅಂತರದಲ್ಲಿಯೇ ಹೆಚ್ಚಿನ ಭಾರದಿಂದ ಬೋಟು ಮುಳುಗಿರುವುದೇ ಸಾಕ್ಷಿಯಾಗಿದೆ.  ಒಂದು ವೇಳೆ ಬೋಟ್ ದಕ್ಕೆಯಿಂದ ಇನ್ನೂ ದೂರವಿದ್ದರೆ ಕಾರವಾರದ ಕೂರ್ಮಗಢದಂತ(Koormaghadha) ದುರ್ಘಟನೆ ನಡೆದು ಸಾವುನೋವುಗಳು ಸಂಭವಿಸುತ್ತಿತ್ತು. ಈ ಘಟನೆಯ ನಂತರ ಪ್ರವಾಸೋದ್ಯಮ ಇಲಾಖೆಯು ಅನಧಿಕೃತ ಬೋಟುಗಳ ಚಟುವಟಿಕೆಯನ್ನು ತಡೆದಿವೆ.

ಹೀಗಾಗಿ ಮೀನುಗಾರ ಸಮಾಜದವರಂತೆ ಬಿಂಬಿಸಿಕೊಂಡು ಕೆಲವರು ಅಧಿಕಾರಿಗಳಿಗೆ ಮತ್ತೆ ಏನ್ ಓ ಸಿ ನೀಡಬೇಕೆಂದು ಮನವಿ ನೀಡಿದ್ದಾರೆ.

ಆದರೆ ಬೀಚ್ ಪ್ರವಾಸೋದ್ಯಮದಲ್ಲಿ ಪ್ರವಾಸಿಗರ ಯೋಗಕ್ಷೇಮಕ್ಕಾಗಿಯೇ ಟೆಂಡರ್ ಪಡೆದವರು ವಿವಿಧ ಸೌಕರ್ಯ, ಸುರಕ್ಷತೆಗಾಗಿ ಕೋಟ್ಯಂತರ ರೂ. ಹಣವನ್ನು ವ್ಯಯಿಸಿದ್ದಾರೆ. ಬೋಟುಗಳು, ಜಲಕ್ರೀಡಾ ಸಾಮಗ್ರಿಗಳು, ವಿಹಾರಾರ್ಥಿಗಳ ಜೀವರಕ್ಷಣೆಗಾಗಿ ಸದಾ ಸಿದ್ಧವಿರುವ ಜೀವರಕ್ಷಕ ಸಾಧನಗಳೊಂದಿಗೆ ಪರಿಣಿತ ಜೀವರಕ್ಷಕರು, ನುರಿತ ಬೋಟ್ ಚಾಲಕರು, ಇತರೆ ರಕ್ಷಣಾ ಸಿಬ್ಬಂದಿಗಳ ಜವಾಬ್ದಾರಿ ಹೊಂದಿದ್ದಾರೆ. ಹೀಗಾಗಿ ಶಿಸ್ತು ಇಲ್ಲದೆ ಕೇವಲ ಬೋಟ್ ಒಂದೇ ಆಧಾರವಾಗಿ ವಿಹಾರಾರ್ಥಿ ಬೋಟ್ಗಳನ್ನಿಟ್ಟುಕೊಂಡವರಿಗೆ ಎಂದಿಗೂ ನಿರಪೇಕ್ಷಣಾ ಪತ್ರ ನೀಡಬಾರದಾಗಿ ಟೆಂಡರ್ ಪಡೆದ ಮಾಲೀಕರ ಸಹೋದ್ಯೋಗಿಗಳು ವಿನಂತಿಸಿದ್ದಾರೆ.

ಹೀಗಾಗಿ ಕಳೆದ ಹಲವು ವರ್ಷಗಳಿಂದ ಜಲಕ್ರೀಡೆ(Water Sports) ಚಟುವಟಿಕೆಯನ್ನು ನಡೆಸಿಕೊಂಡು ಬಂದಿರುವ ನಮಗೆ, ನಮ್ಮ ಕುಟುಂಬ ನಿರ್ವಹಣೆಗೆ ಅನುಕೂಲ ಮಾಡಿಕೊಡುತ್ತಿರುವ ಚಟುವಟಿಕೆಗಳನ್ನ ಮುಂದುವರಿಸಿಕೊಂಡು ಹೋಗಲು ಅವಕಾಶ ಮಾಡಿಕೊಡಿ ಎಂದು  ಹೇಳಿದ್ದಾರೆ.

ಇದರಿಂದ ಸರ್ಕಾರದ ಆದಾಯದ ಜೊತೆಗೆ, ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಪ್ರವಾಸೋದ್ಯಮ ಇಲಾಖೆಗೆ ವಿಶ್ವಾಸಮೂಡಿಸುವಲ್ಲಿ ಸಫಲರಾಗಿದ್ದೇವೆ. ಹೀಗಾಗಿ ಪರಿಣಿತರಲ್ಲದ, ಸುರಕ್ಷತಾ ಕ್ರಮ ಅನುಸರಿಸದ ಹಾಗೂ ಸರಕಾರಕ್ಕೂ ಭದ್ರತೆ ಇಲ್ಲದ, ಕೇವಲ ಬೋಟುಗಳನ್ನೇ ಆಧಾರವಾಗಿ ವಿಹಾರಾರ್ಥಿಗಳನ್ನು ಅನಧಿಕೃತವಾಗಿ ಕರೆದೊಯ್ಯುವವರಿಗೆ ಏನ್ ಓ ಸಿ ನೀಡಬಾರದೆಂದು ಹೇಳಿದ್ದಾರೆ. ಒಂದು ವೇಳೆ ಅನಧಿಕೃತ ಬೋಟುಗಳಿಗೆ ಪ್ರವಾಸೋದ್ಯಮ ಇಲಾಖೆಯಿಂದ ನಿರಪೇಕ್ಷಣಾ ಪತ್ರ ನೀಡಿದಲ್ಲಿ,  ಮೀನುಗಾರ ಸಮುದಾಯದವರಾಗಿರುವ ತಾವೂ  ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.
ಇದನ್ನು ಓದಿ : ಭಟ್ಕಳದಲ್ಲಿ ಜಾನುವಾರು ರಕ್ಷಣೆ

ಶಿರಸಿಯಲ್ಲಿ ಚಿರತೆ ಪ್ರತ್ಯಕ್ಷ

ಮಲ್ಲಾಪುರದಲ್ಲಿ ಯೋಧನ ಅನುಮಾನಾಸ್ಪದ ಸಾವು

ಶಿರೂರು ಗುಡ್ಡ ಕುಸಿತ. ಎರಡು ಕುಟುಂಬಗಳಿಗೆ ಪರಿಹಾರ