ಭಟ್ಕಳ(Bhatkal) : ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿರುವ  ಮುರಿನಕಟ್ಟೆಯಲ್ಲಿ (Murinakatte) ಶ್ರೀ ಮಾರಿಕಾಂಬೆ (Marikambe) ಅಮ್ಮನರ ಹೊರೆ ತೆಗೆಯುವ ವೇಳೆ ಗೊಂದಲ ಉಂಟಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಮಾರಿ ಹೊರೆಯಲ್ಲಿರುವ ದೇವಿಯ ಮರದ ಗೊಂಬೆ ನಾಪತ್ತೆಯಾಗಿದೆ ಎಂದು  ಆರೋಪಿಸಿ ಸ್ಥಳೀಯರು ಆರೋಪಿಸಿದ್ದಾರೆ. ಇದರಿಂದ ಕೆಲಕಾಲ ಆತಂಕದ ವಾತಾವರಣ ಸ್ರಷ್ಟಿಯಾಗಿತ್ತು.

ಕೆಲ ದಿನಗಳ ಹಿಂದಷ್ಟೇ ಆಸರಕೇರಿ(Asarakeri) ಭಾಗದ ಹಿಂದು ಭಕ್ತರು ಭಟ್ಕಳ ಅರ್ಬನ್ ಬ್ಯಾಂಕ್(Bhatkal Urban Bank) ಸಮೀಪದ ವನದುರ್ಗಿ ದೇವಸ್ಥಾನದ ಬಳಿ ಇದ್ದ ಅಮ್ಮನ ಹೊರೆ ಹಾಗೂ ಶಂಸುದ್ದಿನ್ ಸರ್ಕಲ್ (Samsuddin Circle) ಬಳಿ ಇದ್ದ ದೇವಿಯ 2 ಅಮ್ಮನವರ ಗೊಂಬೆಯನ್ನು ಮುರಿನಕಟ್ಟೆಗೆ ಸಾಗಿಸಿ ಬಳಿಕ ದೇವಿಯ ಮರದ ಗೊಂಬೆಗೆ ಪೂಜೆ ಸಲ್ಲಿಸಿದ ಬಂದಿದ್ದರು.

ಮಂಗಳವಾರ ರಾತ್ರಿ ಕಾರಗದ್ದೆ(Karagadde) , ಹುರುಳಿಸಾಲ(Hurulisal), ಕಡವಿನಕಟ್ಟೆ(Kadavinakatte) ಹಾಗೂ ರಂಗಿನಕಟ್ಟೆಯ(Ranginakatte) ಗ್ರಾಮಸ್ಥರು ಮುರಿನಕಟ್ಟೆಯಲ್ಲಿದ್ದ ಅಮ್ಮನವರ ಹೊರೆಯನ್ನು ವೆಂಕಟಾಪುರ ಗಡಿ ಭಾಗಕ್ಕೆ ಸಾಗಿಸಲೆಂದು ಬಂದ ವೇಳೆ ಮುರಿನಕಟ್ಟೆಯಲ್ಲಿದ್ದ 2  ದೇವಿಯ ಮರದ ಗೊಂಬೆಗೆ ಕಾಣಿಯಾಗಿರುವುದು ಗಮನಕ್ಕೆ ಬಂದಿದೆ. ಬಳಿಕ ಈ ವಿಷಯ ಎಲ್ಲಾ ಕಡೆ ಹರಡಿ ಸ್ಥಳಕ್ಕೆ ನೂರಾರು ಮಂದಿ ಜಮಾವಣೆಗೊಂಡು ಕೆಲ ಕಾಲ ಆತಂಕ ಸ್ರಷ್ಟಿಯಾಯಿತು. ತಕ್ಷಣ ಕಾರ್ಯ ಪ್ರವೃತ್ತರಾದ ಭಟ್ಕಳ ನಗರ ಹಾಗೂ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸ್ಥಳ ಪರಿಶೀಲಿಸಿದರು.

ಈ ವೇಳೆ ಸ್ಥಳದಲ್ಲಿದ್ದವರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು.  ನೀವು ಪ್ರಕರಣ ದಾಖಲು ಮಾಡಿ. ನಾವು ಈ ಬಗ್ಗೆ ತನಿಖೆ ಕೈಗೊಳ್ಳುತ್ತೇವೆ ಎಂದು ಪೊಲೀಸರು ಹೇಳಿದ್ದರು.

ಈ ಸಂದರ್ಭದಲ್ಲಿ ಹಿಂದೂ ಮುಖಂಡ ಗೋವಿಂದ ನಾಯ್ಕ, ಶ್ರೀಕಾಂತ ನಾಯ್ಕ, ಸೇರಿದಂತೆ ಇತರರು ಇದ್ದರು. ಗ್ರಾಮೀಣ ಠಾಣೆಯ ಸಿಪಿಐ ಚಂದನ ಗೋಪಾಲ ಹಾಗೂ ನಗರ ಮತ್ತು ಗ್ರಾಮೀಣ ಠಾಣೆಯ ಪಿ ಎಸ್ ಐ  ಹಾಗೂ ಸಿಬ್ಬಂದಿಗಳು ಪರಿಸ್ಥಿತಿ ನಿಭಾಯಿಸಿದರು. ಬಳಿಕ ಸ್ಥಳೀಯರು  ಅಮ್ಮನರ ಹೊರೆಯನ್ನು  ವೆಂಕಟಾಪುರ ಗಡಿಭಾಗಕ್ಕೆ ತಲುಪಿಸಿದರು.

ಇದನ್ನು ಓದಿ : ಕಾರಾಗೃಹದ ಎದುರು ಡ್ರೋನ್ ಪ್ರತಾಪ್ ಕಣ್ಣೀರು

ನಸುಕಿನ ಜಾವ ಸಕ್ಕರೆ ತುಂಬಿದ ಲಾರಿಗೆ ಬೆಂಕಿ.

ಮೈ, ಕೈ ಕಾಲುಗಳಲ್ಲಿ ಮದ್ಯ ಸಾಗಾಟ. ಇಬ್ಬರ ಬಂಧನ

ಇನ್ನೂ ಪತ್ತೆಯಾಗದ ಗಂಗಾವಳಿ ನದಿಯಲ್ಲಿ ಸಿಕ್ಕ ಎಲುಬಿನ ರಹಸ್ಯ.