ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ವಿಶಾಖಪಟ್ಟಣ(Vishakhapattana) : ಒಂದೇ ಒಂದು ರನ್ ತೀರ್ಪು ಅಂಪೈರ್(Umpire) ಓರ್ವನ ಕೊಲೆಗೆ ಕಾರಣವಾದ ಘಟನೆ ವಿಶಾಖಪಟ್ಟಣದಲ್ಲಿ(Visakhapatnam) ನಡೆದಿದೆ.
21 ವರ್ಷದ ಯುವ ಅಂಪೈರ್(Umpire) ಡೋಲಾ ಅಜಿತ್ ಬಾಬು ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಕ್ರಿಕೆಟ್ ಮೈದಾನದಲ್ಲಿ(Cricket Ground) ಆರಂಭವಾದ ಸಣ್ಣವಿವಾದ ದುರಂತಕ್ಕೆ ಕಾರಣವಾಗಿದೆ. ಭಾನುವಾರದಂದು ವಿಶಾಖಪಟ್ಟಣದಲ್ಲಿ (Visakhapatnam) ಸ್ಥಳೀಯ ಕ್ರಿಕೆಟ್ ಪಂದ್ಯವೊಂದು(Cricket Ground) ನಡೆದಿತ್ತು. ಮೂರು ತಂಡಗಳು ಪಂದ್ಯದಲ್ಲಿ ಭಾಗವಹಿಸಿದ್ದವು. ಆಟವೊಂದರಲ್ಲಿ ಅಂಪೈರ್ ನೀಡಿದ ರನ್ ಔಟ್ ತೀರ್ಪು(Runout Decision) ಕೆಲವು ಆಟಗಾರರು ಹಾಗೂ ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಗಿತ್ತು. ವಿಷಯ ಬಳಿಕ ಜಗಳಕ್ಕೆ ತಿರುಗಿ ಕೊಲೆಯಲ್ಲಿ ಮುಕ್ತಾಯಗೊಂಡಿದೆ.
ಪಂದ್ಯ ಮುಕ್ತಾಯ ಸಂದರ್ಭದಲ್ಲಿ ಕಾಂತ ಕಿಶೋರ್(26) ಎಂಬಾತ ಅಂಪೈರ್‌ರನ್ನು ಮಾತುಕತೆ ಹೆಸರಿನಲ್ಲಿ ಮೈದಾನದ ಬದಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಇಬ್ಬರ ಮಧ್ಯೆ ವಾಗ್ವಾದ ತೀವ್ರಗೊಂಡಿದ್ದು, ಆರೋಪಿ ತನ್ನ ಬಳಿ ಇದ್ದ ಚಾಕುವಿನಿಂದ ಅಜಿತ್ ಬಾಬು ಅವರ ಎದೆ ಭಾಗಕ್ಕೆ ಇರಿದಿದ್ದಾನೆ ಎನ್ನಲಾಗಿದೆ.
ತೀವ್ರವಾಗಿ ಗಾಯಗೊಂಡ ಅಜಿತ್ ಬಾಬು ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ, ಚಿಕಿತ್ಸೆ ಪಡೆಯುವ ಮುನ್ನವೇ ಅವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮತ್ತೊಬ್ಬ ಯುವಕ ಚಿರಂಜೀವಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಿದ್ದು, ಹುಡುಕಾಟ ಮುಂದುವರಿಸಲಾಗಿದೆ.
ಇದನ್ನು ನೋಡಿ : ಒಂಬತ್ತು ಪೊಲೀಸರಿಗೆ ಮರಣದಂಡನೆ. ಏನಿದು ಕೇಸ್?
