ಶಿರಸಿ(SIRSI) : ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತದ ಶಿರಸಿ ಉಗ್ರಾಣದಲ್ಲಿ ದಾಸ್ತಾನಿದ್ದ ಅವಧಿ ಮೀರಿದ ಮದ್ಯವನ್ನು  ಕಂದಾಯ ಇಲಾಖೆ(REVENUE DEPARTMENT), ಅಬಕಾರಿ ಇಲಾಖೆ(EXICE DEPARTMENT) ಮತ್ತು ಪಾನೀಯ ನಿಗಮದ ಅಧಿಕಾರಿಗಳ ಸಮಕ್ಷಮದಲ್ಲಿ ನಾಶಪಡಿಸಲಾಯಿತು.

ಒಟ್ಟು 96 ಪೆಟ್ಟಿಗೆ ಹಾಗೂ 79 ಬಾಟಲಿಯಲ್ಲಿನ ಒಟ್ಟೂ 2,60,551ರೂ.ಗಳ ಮೌಲ್ಯದ ಮದ್ಯ ಮತ್ತು ಬಿಯರ್ ನ್ನು ಅಧಿಕಾರಿಗಳು ನಾಶ ಮಾಡಿದರು.

ಶಿರಸಿ ಡಿಪೋ(ಉಗ್ರಾಣ) ಮ್ಯಾನೇಜರ್ ಶ್ರೀಕಾಂತ ಪಂಡಿತ, ಅಬಕಾರಿ ಡಿಎಸ್‌ಪಿ ಶಿವಪ್ಪ, ಅಬಕಾರಿ ನಿರೀಕ್ಷಕ ತಿರುಮಲೇಶ, ಕಂದಾಯ ಇಲಾಖೆಯ ಜಿ.ಆರ್.ಪಾವಸ್ಕರ್ ನೇತೃತ್ವದಲ್ಲಿ ನಾಶ ಮಾಡುವ ಪ್ರಕ್ರಿಯೆ
ನಡೆಯಿತು.

ಇದನ್ನು ಓದಿ : ಅಡಿಕೆ ಕದ್ದ ಖದೀಮರ ಬಂಧನ https://esamachara.com/arrest-of-khadeem-who-stole-nuts/

ಮಾತು ಉಳಿಸಿಕೊಂಡ ಸಚಿವ ಮಂಕಾಳ್ ವೈದ್ಯ

ನಡು ರಸ್ತೆಯಲ್ಲಿ ಕಂಡಕ್ಟರ್ ಗಳ ಮಾರಾಮಾರಿ

ಉತ್ತರಕನ್ನಡ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸಲು ಚೈತ್ರಾ ಮನವಿ

ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಕಟ್ಟುನಿಟ್ಟಿನ ಸೂಚನೆ