ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಭಟ್ಕಳ(Bhatkal) : ಭಟ್ಕಳ ತಾಲೂಕಿನ ಮುರ್ಡೇಶ್ವರ(Murdeshwar) ಒಲಗ ಮಂಟಪದಲ್ಲಿ 50 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ(Ganeshotsava) ಹನ್ನೊಂದು ದಿನಗಳ ಕಾಲ ಅದ್ಧೂರಿಯಾಗಿ ನೆರವೇರಿತು.
ಉತ್ಸವದ ಕೊನೆಯ ದಿನ ಜರುಗಿದ ಶ್ರೀ ಗಣೇಶನ ಮುಡಿಗಂಧ ಪ್ರಸಾದದ(Ganesha Mudigandha Prasadam) ಹರಾಜು ವಿಶೇಷ ಗಮನಕ್ಕೆ ಕಾರಣವಾಯಿತು. ದೇವರ ಮುಡಿಗಂಧ ಪ್ರಸಾದವನ್ನು ಉದ್ಯಮಿ ನೇತ್ರಾಣಿ ಗಣೇಶ ಹರಿಕಾಂತ(Netrani Ganesh) ಅವರು 11ಲಕ್ಷದ 10 ಸಾವಿರ ರೂಪಾಯಿಗೆ ಪಡೆದುಕೊಂಡರು.
ಸಾರ್ವಜನಿಕ ಶ್ರೀ ಗಣೇಶೋತ್ಸವದ ಇತಿಹಾಸದಲ್ಲೇ(Ganeshotsava History) ಇಷ್ಟೊಂದು ಮೊತ್ತಕ್ಕೆ ದೇವರ ಮುಡಿಗಂಧ ಪ್ರಸಾದ ಹರಾಜಾಗಿರುವುದು ದಾಖಲೆಯಾಗಿದೆ.
ಮುಡಿಗಂಧ ಪ್ರಸಾದದ ವಿಶೇಷತೆ: ಮಹಾಪೂಜೆ ಸಂದರ್ಭದಲ್ಲಿ ದೇವರಿಗೆ ಪೂಜೆ ಸಲ್ಲಿಸುವಾಗ ದೇವರ ಮುಡಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಅರ್ಚಕರು ಹೂವು, ತುಳಸಿ, ಶ್ರೀಗಂಧ, ಕುಂಕುಮವನ್ನ ಅರ್ಪಿಸುತ್ತಾರೆ. ಅದಕ್ಕೆ ನೈವೇದ್ಯದಂತಹ ವಸ್ತುಗಳನ್ನು ಸೇರಿಸಿ ಮುಡಿಗಂಧ ಪ್ರಸಾದವಾಗಿ ಕೊನೆಯಲ್ಲಿ ಹರಾಜು ಹಾಕಲಾಗುತ್ತದೆ. ಕೊನೆಯಲ್ಲಿ ಅತ್ಯಂತ ಪವಿತ್ರವಾದ ಪ್ರಸಾದ ಹಾಗೂ ದೇವರ ನೇರ ಆಶೀರ್ವಾದವೆಂದು ನಂಬಲಾಗುತ್ತದೆ. ಹೀಗಾಗಿ ಶ್ರದ್ಧೆಯಿಂದ ಭಕ್ತರು ಹರಾಜಿನಲ್ಲಿ ಭಾಗವಹಿಸುತ್ತಾರೆ.
ಸುವರ್ಣ ಮಹೋತ್ಸವದ (Golden Jubilee Celebration) ಹಿನ್ನಲೆಯಲ್ಲಿ ಮುರ್ಡೇಶ್ವರದ ಶ್ರೀ ಗಣೇಶನನ್ನು ಭಕ್ತರು ಪ್ರಮುಖ ಬೀದಿಗಳಲ್ಲಿ ಅದ್ದೂರಿಯಿಂದ ಮೆರವಣಿಗೆ ನಡೆಸಿದರು. ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.
ಉತ್ಸವದ ಜೊತೆಗೆ ದಾಖಲೆ ಮೊತ್ತದ ಮುಡಿಗಂಧ ಪ್ರಸಾದ ಹರಾಜು ಈ ಬಾರೀ ಪ್ರಮುಖ ಆಕರ್ಷಣೆಯಾಗಿತ್ತು.