ಜೊಯಿಡಾ : ಜನರ, ಮಹಿಳೆಯರ, ಯುವಕರ ಸಮಸ್ಯೆ ಬಗ್ಗೆ ಮುಖಂಡರು ಗಮನ ಹರಿಸಬೇಕು. ಪಕ್ಷದ ಸಂಘಟನೆ ಕೆಲಸ ಮಾಡುವುದು ಕಷ್ಟವಾದ ವಿಷಯ. ಅಧಿಕಾರ ಸಿಕ್ಕ ನಂತರ ಪಕ್ಷ ಸಂಘಟನೆಗೆ ಹೆಚ್ಚಿನ ಆಸಕ್ತಿ ತೋರುವುದಿಲ್ಲ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ ದೇಶಪಾಂಡೆ (R V DESHAPANDE) ಹೇಳಿದರು.
ಜೋಯಿಡಾ ಕುಣಬಿ(JOIDA KUNABI) ಭವನದಲ್ಲಿ ನೂತನ ಬ್ಲಾಕ್ ಅಧ್ಯಕ್ಷರ(BLOCK CONGRES) ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಈ ಹಿಂದಿನ ಬ್ಲಾಕ್ ಅಧ್ಯಕ್ಷರಾಗಿ ವಿನಯ ದೇಸಾಯಿ ಒಳ್ಳೆಯ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯನವರ ಮುಂದಾಳತ್ವದಲ್ಲಿ ಕರ್ನಾಟಕ ಸರಕಾರ ಬಲಿಷ್ಟವಾಗಿ ಮುನ್ನಡೆಯುತ್ತದೆ ಎಂದರು.
ನೂತನ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಾರುತಿ ಗಾವಡೆ ಮಾತನಾಡಿ, ದೇಶಪಾಂಡೆಯವರು ನನಗೆ ಪಕ್ಷ ಸಂಘಟನೆ ಮಾಡುವ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ತಾಲೂಕಿನಲ್ಲಿ ಎಲ್ಲರ ಜೊತೆಗೂಡಿ ಪಕ್ಷ ಸಂಘಟನೆಯ ಕೆಲಸವನ್ನ ಪ್ರಾಮಾಣಕವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಿನಯ ದೇಸಾಯಿ ಮಾತನಾಡಿ, ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಾರುತಿ ಗಾವಡೆಯವರಿಗೆ ಶುಭಾಶಯ ತಿಳಿಸಿ ಮುಂದಿನ ದಿನದಲ್ಲೂ ಕಾಂಗ್ರೇಸ್ ಪಕ್ಷದ ಜೊತೆಗೆ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ(KPCC) ಸದಸ್ಯ ಸದಾನಂದ ದಬಗಾರ, ಮಾಜಿ ಜಿ.ಪಂ ಸದಸ್ಯ ಸಂಜಯ ಹಣಬರ, ಮಾಜಿ ತಾ.ಪಂ ಅಧ್ಯಕ್ಷ ವಿಜಯ ಪಂಡಿತ, ಕರ್ನಾಟಕ ರಾಜ್ಯ ಕಿಸಾನ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ರವಿ ರೇಡ್ಕರ, ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಸುಕನ್ಯಾ ದೇಸಾಯಿ, ಕಾರ್ಮಿಕ ವಿಭಾಗದ ತಾಲೂಕಾಧ್ಯಕ್ಷೆ ಭವಾನಿ ಚೌಹಾನ, ನಾಗೋಡಾ ಗ್ರಾ.ಪಂ ಸದಸ್ಯ ಶ್ರೀಧರ ದಬಾಗಾರ, ಸದಾನಂದ ಉಪಾಧ್ಯ ಮುಂತಾದವರು ಉಪಸ್ಥಿತರಿದ್ದರು.
ಇದನ್ನು ಓದಿ : ಅಂಗನವಾಡಿಗೆ ಗಟ್ಟಿ ಬೆಲ್ಲ. ಗೃಹಲಕ್ಷ್ಮಿ ನಿರಂತರ
ಆಸ್ಪತ್ರೆಗೆ ಬರುತ್ತಿದ್ದ ದಂಪತಿ ಕಾರಿಗೆ ಬಸ್ ಡಿಕ್ಕಿ