ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬಿಹಾರ (Bihar) : ಪತ್ನಿ (Wife) ಮೇಲಿನ ಸಿಟ್ಟಿಗೆ ಪತಿ (Husband) ಮಹಾಶಯನೊಬ್ಬ  ಟ್ರಾಫಿಕ್ ರೂಲ್ಸ್(Trafic Rules) ಉಲ್ಲಂಘಿಸಿ ಫಜೀತಿ ಉಂಟು ಮಾಡಿದ ಘಟನೆ ಬಿಹಾರನ(Bihar) ಮುಜಫರ್‌ಪುರದಲ್ಲಿ ನಡೆದಿದೆ.

ಪತ್ನಿ ಹೆಸರಿನಲ್ಲಿದ್ದ ಸ್ಕೂಟಿಯನ್ನು (Scooty) ಅಡ್ಡಾದಿಡ್ಡಿ ಚಲಾಯಿಸಿ,  ಸಿಕ್ಕಾಪಟ್ಟೆ ದಂಡ ಕಟ್ಟುವಂತೆ ಮಾಡಿದ್ದಾನೆ. ಕೆಲ ದಿನಗಳ ಹಿಂದೆ ಜಗಳವಾಡಿಕೊಂಡು ತಾಯಿ ಮನೆ ಸೇರಿಕೊಂಡಿದ್ದ ಪತ್ನಿ ಡಿವೋರ್ಸ್‌ಗೆ(Wife Devorce) ಅರ್ಜಿ ಸಲ್ಲಿಸಿದ್ದಳು. ಪತ್ನಿಯ ವಿರುದ್ಧ  ಹೇಗಾದರೂ ಮಾಡಿ ಸೇಡು ತೀರಿಸಿಕೊಳ್ಳಬೇಕೆಂದು ಆತ ಪತ್ನಿ ಹೆಸರಲ್ಲಿ ನೋಂದಾಯಿಸಲಾದ ದ್ವಿಚಕ್ರ ವಾಹನವನ್ನು ಬೇಕು ಬೇಕಂತಲೇ ಅಡ್ಡಾದಿಡ್ಡಿ ಓಡಿಸಿ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ್ದಾನೆ.

ತಾನು ರೂಲ್ಸ್ ಬ್ರೇಕ್(Rules Break) ಮಾಡದಿದ್ದರೂ ತನಗೇಕೆ ಪದೇ ಪದೇ ಚಲನ್ ತುಂಬುವ ಪರಿಸ್ಥಿತಿ ಬರುತ್ತಿದೆ ಎಂದು ಅರಿತ ಪತ್ನಿ ಗಂಡನ ಕಿತಾಪತಿಯೆಂದು ತಿಳಿದು  ಫುಲ್ ಶಾಕ್ ಆಗಿದ್ದಾಳೆ. ಇತ್ತೀಚಿಗಷ್ಟೇ ಮದುವೆಯಾಗಿದ್ದ ಇವರಿಬ್ಬರ ಮಧ್ಯೆ ಉಂಟಾದ ಜಗಳ ಅತಿರೇಕಕ್ಕೆ ತಿರುಗಿ ಮಹಿಳೆ ಗಂಡನ ಮನೆ ಬಿಟ್ಟು ತಾಯಿ ಮನೆ ಸೇರಿಕೊಂಡಿದ್ದಾಳೆ. ಅಲ್ಲದೇ ಡಿವೋರ್ಸ್‌ಗೂ   ಅರ್ಜಿ ಸಲ್ಲಿಸಿದ್ದರು.

ಈ ನಡುವೆ ಪತ್ನಿ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂದು ಆ ಮಹಿಳೆಯ ಗಂಡ ಪತ್ನಿಯ ಹೆಸರಿನಲ್ಲಿ ನೋಂದಾಯಿಸಲಾದ ದ್ವಿಚಕ್ರ ವಾಹನದಲ್ಲಿ ಓಡಾಡುತ್ತಾ ಉದ್ದೇಶಪೂರ್ವಕವಾಗಿ ಟ್ರಾಫಿಕ್ ರೂಲ್ಸ್ ಬ್ರೇಕ್‌ (Traffic Rules Break) ಮಾಡಿದ್ದಾನೆ. ಹೀಗಾಗಿ ತನ್ನ ಹೆಸರಿನಲ್ಲಿರುವ ವಾಹನ ಹಿಂತಿರುಗಿಸುವಂತೆ ಗಂಡನ ಬಳಿ ಕೇಳಿಕೊಂಡಿದ್ದಾಳೆ. ತನಗೆ ಡಿವೋರ್ಸ್ ಸಿಗುವವರೆಗೆ ಸ್ಕೂಟಿ ಹಿಂತಿರುಗಿಸುವುದಿಲ್ಲ ಎಂದು ಆತ ಹೇಳಿದ್ದು , ಬಳಿಕ ಮಹಿಳೆ ಪೊಲೀಸ್‌ ಠಾಣೆಗೆ(Police Station) ತೆರಳಿ ದೂರು ನೀಡಿದ್ದಾಳಂತೆ.

ಇದನ್ನು ಓದಿ : ಮರಳು ದಂಧೆ ತಡೆಯಲು ಹೋದ ಮಹಿಳಾ ಅಧಿಕಾರಿಗೆ ಜೀವ ಬೆದರಿಕೆ. ಮೂವರು ಆರೆಸ್ಟ್.

ಆಕಸ್ಮಿಕವಾಗಿ ಗೋಡೌನ್ ಗೆ ಬೆಂಕಿ ಸುತ್ತಮುತ್ತಲಿನ ಮನೆ ಖಾಲಿ.

ಪ್ರೀತಿಯ ಡಾಬಾ, ಜೀವ ಬಂತು ಇನಿಯ. ಹಾವೇರಿಯಲ್ಲೊಂದು ಪವಾಡ.

ಮತ್ತೊಂದು ಸರ್ಕಾರಿ ಬಸ್ ಮರಕ್ಕೆ ಡಿಕ್ಕಿ.ಪ್ರಯಾಣಿಕರಿಗೆ ಗಾಯ

ಸಾಗುವಾನಿ ಮರ ಕಳ್ಳತನ. ಮೂವರ ಬಂಧನ.