ಕಾರವಾರ(KARWAR) : ಒಂದು ವೇಳೆ ಸಿಎಂ ಸ್ಥಾನವನ್ನು ತಾನು ಬಿಟ್ರೆ ನೀನೆ ಸಿಎಂ ಆಗು ಅಂತಾ ಸಿದ್ದರಾಮಯ್ಯ(SIDDARAMAIHA) ಅವರು ದೇಶಪಾಂಡೆಗೆ ಹೇಳಿರಬಹುದು. ಅವರಿಬ್ಬರ ನಡುವೆ ಏನ್ ಮಾತುಕತೆ ಆಗಿದೆ ಅಂತಾ ನಂಗೆ ಗೊತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ(MANKAL VAIDYA) ಹೇಳಿದ್ದಾರೆ.

ಕಾರವಾರದಲ್ಲಿ ಮಾದ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದ್ದಾರೆ. ಆರ್ ವಿ ದೇಶಪಾಂಡೆ ಸಿಎಂ(RV DESHAPANDE CM) ಸ್ಥಾನ ಅಲಂಕರಿಸಿದ್ರೆ ನನ್ನಷ್ಟು ಖುಷಿ ಪಡುವ ವ್ಯಕ್ತಿ ಬೇರೆ ಯಾರು ಇಲ್ಲ. ದೇಶಪಾಂಡೆ ಸಾಹೇಬ್ರು ನಮ್ಮ ಜಿಲ್ಲೆಯ ಹಿರಿಯ ಶಾಸಕರು. ನಮ್ಮ ಜಿಲ್ಲೆಗೆ ಮುಖ್ಯಮಂತ್ರಿ ಸ್ಥಾನ ಸಿಕ್ರೆ ಖುಷಿ ಆಗುವುದು ಸಹಜ. ನಾನಷ್ಟೆ ಅಲ್ಲ, ನಮ್ಮ ಜಿಲ್ಲೆಯ ಬಹುತೇಕ ಕೈ ಶಾಸಕರು ಖುಷಿ ಪಡ್ತಾರೆಂದು ವೈದ್ಯ ಹೇಳಿದರು.

ಸದ್ಯ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಇದ್ದಾರೆ.
ಮುಂದೆಯೂ ಅವರೆ ಮುಖ್ಯಮಂತ್ರಿ ಆಗೀರಬೇಕೆಂಬ ಆಶಯ ಎಲ್ಲರದ್ದು ಆಗಿದೆ. ದೇಶಪಾಂಡೆ ಸಾಹೇಬ್ರು ಮತ್ತು ಸಿಎಂ ಇಬ್ಬರು ಒಳ್ಳೆಯ ಸ್ನೇಹಿತರು. ದೇಶಪಾಂಡೆ ಯವರಿಗೆ ಹೇಳಿರಬಹುದು ನೀನೆ ಸಿಎಂ ಆಗು ಅಂತಾ. ಆದರೆ ನಮಗೆ ವಿಷಯ ಗೊತ್ತಿಲ್ಲ ಎಂದು ಮಂಕಾಳ ವೈದ್ಯ ಪ್ರತಿಕ್ರಿಯಿಸಿದ್ದಾರೆ.

ಇದನ್ನು ಓದಿ : ಸಿಎಂ ಆಗುವ ಆಸೆ ಬಿಚ್ಚಿಟ್ಟ ದೇಶಪಾಂಡೆ.

ಭಟ್ಕಳದಲ್ಲಿ ಹೊಟೇಲ್ ಮೇಲೆ ದಾಳಿ

ಬೇಟೆಗೆ ಬಂದು ಸಾವು ಕಂಡ ಚಿರತೆ