ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ (Bhatkal) : ಅಂದರ್ ಬಾಹರ್ ಜೂಜಾಟ(Joojata) ಆಡುತ್ತಿದ್ದ ಸ್ಥಳದ ಮೇಲೆ ಪೊಲೀಸರು ದಾಳಿ(Police Raid) ಮಾಡಿದ ಘಟನೆ ತಾಲೂಕಿನ ಹೆಬಳೆಯ ಗಾಂಧಿನಗರದಲ್ಲಿ(Heble Gandhinagar) ನಡೆದಿದೆ.
ದಾಳಿ ವೇಳೆ ಏಳು ಜನರು ಸಿಕ್ಕಿಬಿದ್ದಿದ್ದಾರೆ. ಮಂಗಳವಾರ ರಾತ್ರಿ ಗಾಂಧಿನಗರದ ಮನೆಯೊಂದರ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ಆಡುತ್ತಿದ್ದರು. ಮಾಹಿತಿ ಪಡೆದ ಭಟ್ಕಳ ಗ್ರಾಮೀಣ ಠಾಣೆ(Bhatkal Rural Station) ಪಿಎಸ್‌ಐ ಭರಮಪ್ಪ ಬೆಳಗಲಿ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.
ಈ ಸಂದರ್ಭದಲ್ಲಿ ಹೆಬಳೆಯ ಹೇರಕೇರಿ ನಿವಾಸಿಗಳಾದ ಶೇಖರ ಬಡಿಯಾ ಗೊಂಡ (30), ರಾಜೇಶ ಮಂಜು ಗೊಂಡ (40), ತೆಂಗಿನಗುಂಡಿ ನಿವಾಸಿ ನವೀನ ಬಡಿಯಾ ಗೊಂಡ (28), ಜಗದೀಶ ಮಂಜುನಾಥ ನಾಯ್ಕ (35), ಹೆರ್ತಾರಿನ ರಾಮ ತಿಮ್ಮಪ್ಪ ಗೊಂಡ (42), ವರಕೊಡ್ಲು ನಿವಾಸಿ ಪಾಂಡು ಸಣ್ಣು ಗೊಂಡ (30), ಶಿರಾಲಿ ಚಿತ್ರಾಪುರದ ರಾಜೇಶ ತಿಮ್ನಪ್ಪ ಗೊಂಡ (25) ಎಂಬುವವರು ಸಿಕ್ಕಿಬಿದ್ದಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ಬಡ್ಡಿ ದಂಧೆಕೋರರ ಮೀಟರ್ ಇಳಿಸಿದ ಪೊಲೀಸರು. ಇಬ್ಬರ ಬಂಧನ
ಅದ್ದೂರಿಯಿಂದ ಜರುಗಿದ ನಿಚ್ಚಲಮಕ್ಕಿ ಶ್ರೀ ವೆಂಕಟರಮಣ ದೇವರ ಪಾಲಕಿ ಉತ್ಸವ.