ಭಟ್ಕಳ(BHATKAL) : ಕರ್ನಾಟಕ ರತ್ನ ಅಪ್ಪು ಅಭಿಮಾನಿಗಳ ಸೇವಾದಳ ಭಟ್ಕಳ ವತಿಯಿಂದ ಅಪ್ಪು ದೀಪಾವಳಿ ಉತ್ಸವ(Appu Deepavali Utsav) ಎನ್ನುವ ವಿನೂತನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಪವರ್ ಸ್ಟಾರ್ (Power Star) ಅವರನ್ನ ನೆನಪಿಸಲು 12 ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಯಿತು. ತಾಲೂಕಿನ ಸೋಡಿಗದ್ದೆ ಕ್ರಾಸ್ ನಲ್ಲಿರುವ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ದಿನಸಿ ಕಿಟ್ ವಿತರಣೆ ಕಾರ್ಯಕ್ರಮ ನಡೆಯಿತು. ದೀಪಾವಳಿ ಹಬ್ಬದಲ್ಲಿ ದಿ. ಡಾ ಪುನೀತ್ ರಾಜಕುಮಾರ(Dr Puneet Rajkumar) ಹೆಸರಿನಲ್ಲಿ ಕೆಲ ಬಡವರ ಹಸಿವನ್ನು ನೀಗಿಸುವ ನಿಟ್ಟಿನಲ್ಲಿ ದಾನಿಗಳ ಸಹಾಯದಿಂದ ಸಂಗ್ರಹಿಸಿದ ಹಣದಲ್ಲಿ ತಾಲೂಕಿನ 12 ಬಡ ಕುಟುಂಬಗಳಿಗೆ 1700 ಮೊತ್ತ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು.
ಸಂಘವು ಈಗಾಗಲೇ ಅನೇಕರಿಗೆ ಸಹಾಯ ಹಸ್ತ ನೀಡಿ ನೆರವಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ತಾಲೂಕಿನ ಯಲ್ವಡಿಕವೂರ ಗ್ರಾಮ ಪಂಚಾಯತ (Yalwadi kavuru Grama Panchayat) ವ್ಯಾಪ್ತಿಯಲ್ಲಿ ಅನಾರೋಗ್ಯ ಪೀಡಿತ ಬಡ ಮಹಿಳೆಯೋರ್ವಳ ಚಿಕಿತ್ಸೆಗೆ ದಾನಿಗಳ ಸಹಾಯದಿಂದ 27 ಸಾವಿಕ್ಕೂ ಅಧಿಕ ಹಣ ಸಂಗ್ರಹಸಿ ಕುಟುಂಬಕ್ಕೆ ನೀಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರತ್ನ ಅಪ್ಪು ಅಭಿಮಾನಿಗಳ ಸೇವಾದಳ ಭಟ್ಕಳದ ಸದಸ್ಯ ತಿಮ್ಮಯ್ಯ ನಾಯ್ಕ, ಪುನೀತ್ ರಾಜ್‌ಕುಮಾರ್ ಅವರು ಸಿನಿಮಾಗಳ ಹೊರತಾಗಿ ಹಲವು ಸಮಾಜ ಸೇವೆ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅದೆಷ್ಟೋ ಬಡ ಕುಟುಂಬ(Power Family), ಅನಾಥಾಶ್ರಮ, ಗೋ ಶಾಲೆ ಸೇರಿದಂತೆ ಅದೇಷ್ಟೋ ಜನರಿಗೆ ಲೆಕ್ಕವಿಲ್ಲದಷ್ಟು ಸಹಾಯ ಸಹಕಾರ ಮಾಡಿದ್ದಾರೆ. ಆ ನಿಟ್ಟಿನಲ್ಲಿ ಅವರು ಹಾಕಿಕೊಟ್ಟ ಹಾದಿಯಲ್ಲಿ ನಮ್ಮ ಕೈಲಾಗುವಷ್ಟು ಬಡ ಜನರಿಗೆ ನಮ್ಮ ಸಂಘದ ವತಿಯಿಂದ ದಾನಿಗಳ ಸಹಾಯದಿಂದ ಸಹಾಯ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಗಣಪತಿ ನಾಯ್ಕ, ಪ್ರಮೋದ ನಾಯ್ಕ, ನಾಗೇಶ ನಾಯ್ಕ, ರವೀಂದ್ರ ಮೊಗೇರ, ವಿಶ್ವನಾಥ ಮೊಗೇರ ಇದ್ದರು.
ಇದನ್ನು ಓದಿ : ರತನ್ ಟಾಟಾ ಮುದ್ದಿನ ಶ್ವಾನಕ್ಕೂ ಆದಾಯದಲ್ಲಿ ಪಾಲು
ಕಾರವಾರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಭಟ್ಕಳ ಮೂಲದ ಪ್ರೇಮಾ.