ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) (Bangalore) : ಮಲೆನಾಡು(Malenadu) ಭಾಗದಲ್ಲಿ ಸಕ್ರಿಯರಾಗಿದ್ದ ನಕ್ಸಲರು(Naxal) ಶಸ್ತ್ರ ತ್ಯಾಗಕ್ಕೆ ಸಿದ್ದರಾಗಿದ್ದಾರೆ. ನಕ್ಸಲ್ ಮುಖಂಡ ವಿಕ್ರಂ ಗೌಡ ಎನ್‌ಕೌಂಟರ್‌ನಲ್ಲಿ (Encounter) ಹತ್ಯೆಯಾದ ಬಳಿಕ ಎದೆಗುಂದಿರುವ ಕೆಲವು ನಕ್ಸಲರು ಶರಣಾಗಲು (Surrender) ಬಯಸಿದ್ದಾರೆ.

ಜನವರಿ ಎಂಟರಂದು  ಚಿಕ್ಕಮಗಳೂರು (Chikkamanglore) ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠರ ಸಮ್ಮುಖದಲ್ಲಿ ಆರು ನಕ್ಸಲರು ಶಸ್ತ್ರತ್ಯಾಗ ಮಾಡಿ ಸಮಾಜದ ಮುಖ್ಯವಾಹಿನಿಗೆ (Mainstream) ಸೇರಲಿದ್ದಾರೆಂದು ತಿಳಿದುಬಂದಿದೆ.

ನಕ್ಸಲ್‌ ಶರಣಾಗತಿಯ ಪ್ಯಾಕೇಜ್ ಅಡಿಯಲ್ಲಿ ಸಕ್ರಿಯ ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಕ್ರಿಯೆ ನಡೆಯುತ್ತಿದೆ. ನಕ್ಷಲ್ ಮುಖಂಡ ವಿಕ್ರಂ ಗೌಡ ಎನ್‌ಕೌಂಟರ್ ಬಳಿಕ  ಸ್ವತಹ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ (CM Siddaramaiha) ನಕ್ಸಲರು ಕಾನೂನು ಸಮ್ಮತ ಬದುಕಿಗೆ ಬರಲು ಇಚ್ಚಿಸಿದರೆ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನಕ್ಸಲ್ ನಾಯಕಿ ಮುಂಡಗಾರು ಲತಾ ಸೇರಿದಂತೆ ಆರು ಮಂದಿ ನಕ್ಸಲರು ಶರಣಾಗಲಿದ್ದಾರೆಂದು ಗೊತ್ತಾಗಿದೆ.

ಮುಂಡಗಾರು ಲತಾ, ವನಜಾಕ್ಷಿ ಬಾಳೆಹೊಳೆ, ಸುಂದರಿ ಕುತ್ತೂರು, ಮಾರೆಪ್ಪ ಅರೋಲಿ, ಕೆ.ವಸಂತ, ಟಿ.ಎನ್. ಜೀಶ್ ಶರಣಾಗಲಿರುವ ನಕ್ಸಲರು ಎನ್ನಲಾಗಿದೆ. ಹೆಬ್ರಿಯಲ್ಲಿ ನಡೆದ ನಕ್ಸಲ್ ಮುಖಂಡ ವಿಕ್ರಮ್ ಗೌಡ ಎನ್‌ಕೌಂಟರ್ ಬಳಿಕ ಭೂಗತರಾಗಿರುವ ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನವನ್ನು ನಕ್ಸಲ್ ಶರಣಾಗತಿ ಸಮಿತಿ, ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರು ನಡೆಸಿದ್ದರು. ಸರಕಾರ ಕೂಡ ಸಕ್ರಿಯ ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಉದ್ದೇಶದಿಂದ ನಕ್ಸಲ್ ಶರಣಾಗತಿ ಪ್ಯಾಕೇಜ್-2024 ಘೋಷಣೆ ಮಾಡಿತ್ತು. ಒಂದು ವೇಳೆ ಇವರು ಶರಣಾದರೆ ಮಲೆನಾಡು ನಕ್ಸಲ್ ಪೀಡಿತ ಪ್ರದೇಶದ ಹಣೆಪಟ್ಟಿ ಕಳಚಲಿದೆ.

ಇದನ್ನು ಓದಿ : ನಾಲ್ವರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ.

ಎಚ್ಚರ! ವೈರಸ್ ಬಗ್ಗೆ ಆರೋಗ್ಯ ಇಲಾಖೆಯ ಮಾರ್ಗಸೂಚಿ ಪ್ರಕಟ.

ಭಟ್ಕಳದಲ್ಲಿ ಬಸ್ ಹಾಯ್ದು ಪಾದಚಾರಿ ದುರ್ಮರಣ.

ಒಕ್ಕರಿಸಿತಾ ಚೀನಾ ವೈರಸ್. ರಾಜಧಾನಿ ಬೆಂಗಳೂರಲ್ಲಿ HMPV ಸೋಂಕು ಪತ್ತೆ.

ಮುರ್ಡೇಶ್ವರ ಹಾಗೂ ಇಡಗುಂಜಿಗೆ ನಟಿ ಪೂಜಾ ಗಾಂಧಿ ಭೇಟಿ.