ಪಣಜಿ(PANAJI): ಗೋವಾ(GOA) ಗಡಿಯೊಳಗೆ ಮಲ್ಪೆಯ ಹೈಸ್ಪೀಡ್ ಬೋಟುಗಳು ಆಗಮಿಸಿ ಮೀನುಗಾರಿಕೆ(FISHING) ನಡೆಸುತ್ತಿರುವ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರಾಜ್ಯದ ಜಲಗಡಿಯನ್ನು ಅತಿಕ್ರಮಿಸಿ ಮೀನುಗಾರಿಕೆ ನಡೆಸುವ ಹೊರ ರಾಜ್ಯದ ಬೋಟುಗಳನ್ನು ಜಫ್ತು ಮಾಡಲಾಗುವುದು ಅಲ್ಲದೇ 10 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ(CM PRAMOD SAVANT) ಎಚ್ಚರಿಸಿದ್ದಾರೆ.
ಉಡುಪಿ ಜಿಲ್ಲೆಯ ಮಲ್ಪೆಯ ಹೈಸ್ಪೀಡ್ ಬೋಟುಗಳು(MALPE HISPEED BOAT) ಗೋವೆಯ ಜಲಗಡಿಯೊಳಗಡೆ ಬಂದು ಆಳ ಸಮುದ್ರ ಮೀನುಗಾರಿಕೆಯನ್ನು ನಡೆಸುತ್ತಿರುವ ಕುರಿತು ಸ್ಥಳಿಯ ಮೀನುಗಾರರು ಹಲವು ಬಾರಿ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ಕಳೆದ ತಿಂಗಳು ಮೀನುಗಾರಿಕೆ ನಡೆಸುತ್ತಿದ್ದ ಮಲ್ಪೆಯ ದೋಣಿಯೊಂದನ್ನು ಸ್ಥಳೀಯ ಮೀನುಗಾರರು ಬೆನ್ನತ್ತಿ ಹೋಗಿ, ಘರ್ಷಣೆಯೂ ನಡೆದಿತ್ತು. ಘಟನೆಯಲ್ಲಿ ತಮ್ಮ ಬಲೆಗಳನ್ನು ಮಲ್ಪೆಯ ಮೀನುಗಾರರು ಕತ್ತರಿಸಿ ಹಾಕಿದ್ದಾರೆ ಎಂದು ಸ್ಥಳಿಯ ಮೀನುಗಾರರು ಆರೋಪಿಸಿದ್ದರು. ತಮ್ಮ ಮೇಲೆ ಸ್ಥಳೀಯ ಮೀನುಗಾರರು ಹಲ್ಲೆ ನಡೆಸಿದ್ದಾರೆ ಎಂದು ಮಲ್ಪೆಯ ಮೀನುಗಾರರು ಗೋವಾ ಪೊಲೀಸರಿಗೆ ದೂರು ನೀಡಿದ್ದರು.
ಮಲ್ಪೆಯ ಮೀನುಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯ ಮೀನುಗಾರರು ಪೊಲೀಸ್ ಠಾಣೆ(POLICE STATION) ಎದುರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮೀನುಗಾರರ ಮುಖಂಡ ಪೀಲೆ ಫರ್ನಾಂಡೀಸ್ ಎಂಬುವವರು ತಾವೂ ಧರಿಸಿದ ಬಟ್ಟೆ ಬಿಚ್ಚಿ, ಲಂಗೋಟಿಯಲ್ಲಿಯೇ ನಿಂತು ಅಸಮಾಧಾನ ವ್ಯಕ್ತಪಡಿಸಿದ್ದರು. “ನಮ್ಮದು ಹಿಂದಿನಿಂದಲೂ ಇದೇ ರೀತಿಯಲ್ಲಿ ಬದುಕುತ್ತಿರುವ ಸಮಾಜ. ಬಿಸಿಲು, ಮಳೆ ಎನ್ನದೇ ಮೀನುಗಾರಿಕೆಯಿಂದಲೇ ಜೀವನ ನಡೆಸುತ್ತಿರುವವರು. ಮಲ್ಪೆಯ ಮೀನುಗಾರರು ಇಲ್ಲಿ ಬಂದು ಮೀನುಗಾರಿಕೆ ನಡೆಸುತ್ತಿರುವುದರಿಂದ ನಾವು ಬದುಕುವುದು ಅಸಾಧ್ಯವಾಗಿದೆ” ಎಂದು ಆರೋಪಿಸಿದರು.
ಬೋಟು ಜಪ್ತಿ. ಹತ್ತು ಲಕ್ಷ ರೂಪಾಯಿ ದಂಡ ಎಚ್ಚರಿಕೆ :
ಘಟನೆ ಸಂಬಂಧಪಟ್ಟಂತೆ ಮೀನುಗಾರರ ನಿಯೋಗವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಪ್ರಮೋದ ಸಾವಂತ, “ಇದು ಗೋವೆಯ ಮೀನುಗಾರರ (GOA FISHERMAN) ಬದುಕಿನ ಪ್ರಶ್ನೆಯಾಗಿದೆ. ರಾಜ್ಯದ ಜಲ ಗಡಿಯನ್ನು ಅತಿಕ್ರಮಿಸಿ ಅಕ್ರಮವಾಗಿ ಮೀನುಗಾರಿಕೆ ನಡೆಸುವ ಹೊರ ರಾಜ್ಯದ ಬೋಟುಗಳನ್ನು ಮುಟ್ಟುಗೋಲು ಹಾಕಲಾಗುವುದು. ಮೀನುಗಾರರನ್ನು ಬಂಧಿಸಲಾಗುವುದು ಮತ್ತು ಅವರ ಮೇಲೆ ಹತ್ತು ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿ : ಲೋಕಾಯುಕ್ತ ಎಡಿಜಿಪಿ ಮೇಲೆ ಕ್ರಮಕ್ಕೆ ಒತ್ತಾಯ
ಪ್ರಯಾಣಿಕರ ಗಮನಕ್ಕೆ. ಯಶವಂತಪುರ ಕಾರವಾರ ವಿಶೇಷ ರೈಲು