ಭಟ್ಕಳ (BHATKAL): ಅಪ್ರಾಪ್ತ ಯುವತಿ ಮತ್ತು ಅನ್ಯ ಕೋಮಿನ ಯುವಕನಿಗೆ ಬಾಡಿಗೆ ಮನೆ ಕೊಡಿಸಲು ಸಹಾಯ ಮಾಡಿದ ವ್ಯಕ್ತಿಯ ಮೇಲೆ ಸೋಮೊಟೊ ಕೇಸ್ ದಾಖಲಿಸುವಂತೆ ವಿಶ್ವ ಹಿಂದೂ ಪರಿಷತ್ (VISHWA HINDU PARISHAT) ಭಟ್ಕಳ ಘಟಕ ಆಗ್ರಹಿಸಿದೆ.

ಈ ಬಗ್ಗೆ ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆಯ (BHATKAL RURAL POLICE STATION)ಪೋಲಿಸ್‌ ನಿರೀಕ್ಷಕರಿಗೆ ಮನವಿ ಸಲ್ಲಿಸಿದ್ದಾರೆ. ಭಟ್ಕಳದ ಹುರುಳಿಸಾಲಿನಲ್ಲಿ ಮಹಾರಾಷ್ಟ್ರದ (MAHARASHTRA) ಅಪ್ರಾಪ್ತ ಹಿಂದೂ ಹುಡುಗಿಯನ್ನು ಓಡಿಸಿಕೊಂಡು ಬಂದ ಜಾರ್ಖಂಡ್ (JARKHAND) ಮೂಲದ ಅನ್ಯ ಕೋಮಿನ ಹುಡುಗನಿಗೆ  ಒಂದೇ ಮನೆಯಲ್ಲಿ ಒಟ್ಟಿಗೆ ಇರಲು ಬಾಡಿಗೆ ಮನೆ ಕೊಡಿಸಲು ಬಂದಾಗ ಸ್ಥಳೀಯರು ಅನುಮಾನಗೊಂಡಿದ್ದರು.  ವಿಚಾರಿಸಿದ ಸಂದರ್ಭದಲ್ಲಿ ಹುಡುಗಿ ಅಪ್ರಾಪ್ತೆ ಎಂಬುದು ಗೊತ್ತಾಗಿದೆ. ಹೀಗಾಗಿ   ಗ್ರಾಮೀಣ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿ ಜೋಡಿಯನ್ನು ಒಪ್ಪಿಸಿದ್ದಾರೆ.

ಈ ಪ್ರಕರಣದಲ್ಲಿ  ಬೇರೆ ಬೇರೆ ಕೋಮಿನವರು ಎಂದು ಗೊತ್ತಿದ್ದರೂ ಸಹ ಯುವಕ ಅವರಿಗೆ ನೆರವಾಗಿದ್ದಾನೆ. ಯುವಕನ ಮೇಲೆ ಲವ್ ಜಿಹಾದ್ (LOVE JIHAD) ಮಾಡುತ್ತಿರುವ ಬಗ್ಗೆ ಅನುಮಾನವಿದೆ. ಈ ಮೊದಲು ಸಹ ಇಂತಹ ಪ್ರಕರಣಗಳಲ್ಲಿ ಈತ ಭಾಗಿಯಾಗಿರುವ ಸಂದೇಹವಿದೆ. ಈಗಾಗಲೇ ಇಂತಹ ಹಲವಾರು ಪ್ರಕರಣಗಳು ನಡೆಯುತ್ತಿದ್ದು ಈ ಪ್ರಕರಣವು ಬೆಳಕಿಗೆ ಬಂದಿದೆ ಎಂದು ವಿಶ್ವ ಹಿಂದು ಪರಿಷತ್‌ (VHP) ಮನವಿಯಲ್ಲಿ ತಿಳಿಸಿದೆ.

ಈತನನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಈತನ ಮೇಲೆ ಸೋಮೊಟೋ ಕೇಸ್ ದಾಖಲಿಸಬೇಕು. ಜೊತೆಗೆ ಈ ಹಿಂದೆಯೂ ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿರುವುದರ ಬಗ್ಗೆ ತನಿಖೆ ನಡೆಸಬೇಕು ಎಂದು ಭಟ್ಕಳ ಹಿಂದೂ ಪರಿಷತ್ ಆಗ್ರಹಿಸಿದೆ.

ಸಂಘಟನೆ ಕಾರ್ಯದರ್ಶಿ ಮಂಜುನಾಥ ದೇವಾಡಿಗ, ಶ್ರೀಕಾಂತ ನಾಯ್ಕ, ರಾಘವೇಂದ್ರ ನಾಯ್ಕ, ಲೋಕೇಶ ದೇವಾಡಿಗ, ಶಿವರಾಮ ದೇವಾಡಿಗ, ದಯಾನಂದ ಜಾಲಿ, ವಿವೇಕ ನಾಯ್ಕ ಜಾಲಿ, ಕುಮಾರ ನಾಯ್ಕ ಹನುಮಾನ ನಗರ, ಮುಂತಾದವರು ಉಪಸ್ಥಿತರಿದ್ದರು.

ಇದನ್ನು ಓದಿ : ಬಿಜೆಪಿಯಲ್ಲಿ ನಿಷ್ಠಾವಂತರ ಕಡೆಗಣನೆ.

ಗೋವಾ ಗಡಿಯಲ್ಲಿ ಯಾಂತ್ರಿಕ ಬೋಟುಗಳ ಜಲಯುದ್ಧ

ಲೋಕಾಯುಕ್ತ ಎಡಿಜಿಪಿ ಮೇಲೆ ಕ್ರಮಕ್ಕೆ ಜೆಡಿಎಸ್ ಒತ್ತಾಯ