ಕಾರವಾರ : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾದ ಚಿತ್ರ ನಟ ದರ್ಶನ್ ಕೊಡಲೇ ಬಿಡುಗಡೆಯಾಗುವಂತೆ ಕುಟುಂಬದವರು ಕೈಗಾದಲ್ಲಿರುವ ಶನೇಶ್ವರ, ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದರು.
ದರ್ಶನ್ ಸಹೋದರಿ ದಿವ್ಯಾ ಅವರು ತಮ್ಮ ಪತಿ ಮಂಜುನಾಥ ಅವರೊಂದಿಗೆ ವಿಶೇಷ ಪೂಜೆ ಮಾಡಿದ್ದಾರೆ. ಮಂಜುನಾಥ ಕಳೆದ ಕೆಲ ವರ್ಷಗಳಿಂದ NPCIL ನಲ್ಲಿ ಕೆಲಸ ಮಾಡುತ್ತಿದ್ದಾರೆ. ಡಿ ಬಾಸ್ ದರ್ಶನ್ ಆದಷ್ಟು ಬೇಗ ಪ್ರಕರಣದಿಂದ ಮುಕ್ತರಾಗಬೇಕು. ಅಭಿಮಾನಿಗಳು ಮತ್ತು ಸಾರ್ವಜನಿಕರ ಸೇವೆ ಮಾಡುವಂತಗಬೇಕು ಎಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಕೈಗಾ ವಸತಿ ಸಂಕೀರ್ಣದಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ದರ್ಶನ್ ಹೆಸರಿನಲ್ಲಿ ನವಗ್ರಹ ಪೂಜೆ, ಶನಿಶಾಂತಿ ಪೂಜೆ ಸಲ್ಲಿಸಿದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಾಗ ಕೈಗಾದಲ್ಲಿರುವ ಸಹೋದರಿ ಮನೆಗೆ ಬರುತ್ತಿದ್ದರು.