ಕಾರವಾರ(KARWAR) : ಕರಾವಳಿ(COASTAL) ಭಾಗದ ಮೀನುಗಾರ ಮಹಿಳೆಯರು ದೇವರ ಆರಾಧನೆಯಲ್ಲಿ ಸದಾ ಮುಂದೆ. ಮಾಡುವ ಯಾವುದೇ ಕೆಲಸಗಳಲ್ಲಿ ದೈವದ ಅಪ್ಪಣೆ ಪಡೆದು ಮುಂದೆ ಸಾಗುತ್ತಾರೆ. ಶ್ರಾವಣ ಮಾಸದ ಸಂದರ್ಭದಲ್ಲಿ ಅವರು ಪೂಜಿಸುವ ರೀತಿ ವಿಶಿಷ್ಟ.

ಶ್ರಾವಣ ಮಾಸದ ಒಂದು ದಿನ ಕಾರವಾರದ ಮೀನು ಮಾರುಕಟ್ಟೆಯಲ್ಲಿ ಮೀನು ವ್ಯಾಪಾರ ಮಾಡುವ ಮಹಿಳೆಯರು ಸತ್ಯ ನಾರಾಯಣ ವೃತ ಆಚರಿಸುತ್ತಾರೆ. ಕಳೆದ ನಾಲ್ಕು ವರ್ಷಗಳಿಂದ  ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಾರೆ. ಮಾರುಕಟ್ಟೆಯಲ್ಲೂ ಸಹ ಯಾವುದೇ ತೊಂದರೆ ಬಾರದೆ ಕುಟುಂಬದಲ್ಲಿ ಸದಾ ಆರೋಗ್ಯ, ಆಯುಷ್ಯ ಪ್ರಾಪ್ತಿಗಾಗಿ ದೇವರಲ್ಲಿ ಬೇಡಿಕೊಳ್ಳುತ್ತಾರೆ. ಶನಿವಾರ ನಗರದ ಮೀನು ಮಾರುಕಟ್ಟೆಯಲ್ಲಿ ಪೂಜೆ ನಡೆಯಿತು.

ಕಾರ್ಯಕ್ರಮದ ಒಂದು ದಿನ ಮುಂಚೆ ಮಾರುಕಟ್ಟೆಯನ್ನ ಶುದ್ಧಗೊಳಿಸುತ್ತಾರೆ. ಬಳಿಕ ದೇವರ ಫೋಟೋ ಇಟ್ಟು ಅಲಂಕಾರ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವ ಎಲ್ಲಾ ಮಹಿಳೆಯರು ಶ್ರಾವಣ ಮಾಸದ ಶ್ರೀ ಸತ್ಯ ನಾರಾಯಣ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ಬಾರಿಯೂ ಸಹ ನೂರಾರು ಸಂಖ್ಯೆಯಲ್ಲಿ ಮಹಿಳೆಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.

ಇದನ್ನು ಓದಿ : ಹಾರವಾಡದಲ್ಲಿ ಹಾರಿ ಹೋಯಿತು ಬದುಕು.

ರಾಜನಂತೆ ನಡೆದ ರಾಜಣ್ಣ

ಗಾಂಧಿ ಮಾರ್ಕೆಟ್ನಲ್ಲಿ ನೀನಾ ನಾನಾ

ಈಶ್ವರನಿಗೆ ಲಕ್ಷ ಭಸ್ಮಾರ್ಚನೆ

i