ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ(Ankola) : ಧೀರ್ಘ ಕಾಲದ ಪ್ರೀತಿಗೆ ಹುಡುಗಿ ಪೂರ್ಣವಿರಾಮ ಇಟ್ಟಿದ್ದಾಳೆಂದು ನೊಂದು ಯುವಕನೋರ್ವ ನೇಣು ಪಾಶಕ್ಕೆ ಕೊರಳೊಡ್ಡಿದ(Sucide) ಘಟನೆ ಅಂಕೋಲಾದಲ್ಲಿ ನಡೆದಿದೆ.
ಸಂತೋಷ ರೂಪಾ ಗೌಡ (29) ಎಂಬಾತಾನೆ ಆತ್ಮಹತ್ಯೆ(Sucide) ಮಾಡಿಕೊಂಡ ದುರ್ದೈವಿ. ಈತ ಸಂತು ವಾಸರ – ಕುದ್ರಗಿ(Vasara kudragi) ವ್ಯಾಪ್ತಿಯ ಮೇಲಿನಗುಳಿ ನಿವಾಸಿಯಾಗಿದ್ದಾನೆ. ಕಳೆದ 8 ವರ್ಷಗಳಿಂದ ತಾನು ಪ್ರೀತಿಸಿದ ಹುಡುಗಿ ಜೊತೆ ಸದ್ಯವೇ ಮದುವೆ ಆಗಬೇಕೆಂದು ನಿರ್ಧರಿಸಿದ್ದ. ಆದರೆ ಹುಡುಗಿ ಕಳೆದ ಸುಮಾರು ಕೆಲ ದಿನಗಳಿಂದ ತನ್ನನ್ನು ದೂರ ಮಾಡುತ್ತಿದ್ದಾಳೆ ಎಂದು ನೊಂದಿದ್ದ. ಬೇಸತ್ತು ಡೆತ್ ನೋಟ್ ಬರೆದು ಪ್ರೀತಿಸಿದ ಹುಡುಗಿಯ ಊರು ಬೆಳಸೆ- ಚಂದುಮಠ ಬಳಿಯೇ ಹೋಗಿ ಮರಕ್ಕೆ ನೇಣು ಬಿಗಿದುಕೊಂಡು ಅತ್ಮಹತ್ಯಗೆ ಶರಣಾಗಿದ್ದಾನೆ.
ಸಂತೋಷ್ ಸಾಯುವ ಮುನ್ನ ‘ನಾನು ಸಾವುತ್ತಿದ್ದೇನೆ. ಕಾರಣ ನಾನು love ಮಾಡಿದ್ದ ಹುಡುಗಿ ಈಗ ನನಗೆ ಬಿಡುತ್ತೇನೆ ಎಂದು ಹೇಳುತ್ತಾಳೆ. ನಾನು love ಮಾಡಿ 8 ವರ್ಷ ಆಯಿತು. ಈಗ ನಾನು ಮೇ ತಿಂಗಳಲ್ಲಿ ಮದುವೆ ಆಗಬೇಕಾಗಿತ್ತು.
ಈಗ ನಂಗೆ ಈ ತರ ಮಾಡಿದ್ರು. ನಾನು 8 ವರ್ಷ ಆಯಿತು Love ಮಾಡಿ ಎಲ್ಲಾ ನನ್ನ ಫ್ರೆಂಡ್ಸ್ ಹಾಗೂ ಎಲ್ಲಾ ಊರಿಗೂ ಗೊತ್ತು, ಆದರೆ ಇವಾಗ ನಂಗೆ ಇತರ ಮಾಡಿದ್ರು, ನಂಗೆ 20 ದಿನ ಆಯ್ತು ಇತರ ಮಾಡಿ. ನನ್ನ ಪರಿಸ್ಥಿತಿ ಯಾರಿಗು ಬೇಡ ಯಾರತ್ರ ನು ಹೇಳುಗಾಗದೆ ಇದ್ದೆ. ನಂಗೆ ಊಟನು ಸೇರುದಿಲ್ಲಾ ನಿದ್ದೆನು ಬರುದಿಲ್ಲ . ನನ್ನಿಂದ ಬೇಜಾರ ಆದರೆ ಫ್ರೆಂಡ್ಸ್ ತಪ್ಪಾಯ್ತು . ನಮ್ಮ ಅಣ್ಣಂದಿರಿಗೆ ಹೇಳುತ್ತೆನೆ ಅಮ್ಮನನ್ನು ಚೆನ್ನಾಗಿ ನೋಡಿ ಕೊಳ್ಳಿ ಅಣ್ಣ. ನನ್ನ ಪರಿಸ್ಥಿತಿ ಯಾರಿಗೂ ಬರುದು ಬೇಡ ನನ್ನ ಸಾವು ಎಲ್ಲಾ Lovers ಗೂ ಗುತ್ತಾಗಬೇಕು ಎಲ್ಲರಿಗೂ ಕೈ ಮುಗಿದು ಬೇಡಿಕೊಳ್ಳುತ್ತೇನೆ ಎಂದು ತನ್ನದೇ ಭಾಷೆಯಲ್ಲಿ ಪತ್ರದಲ್ಲಿ ತಿಳಿಸಿದ್ದಾನೆ.
ಅಂಕೋಲಾ ಪೊಲೀಸ್ ಠಾಣೆಯಲ್ಲಿ(Ankola Police Station) ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸಿದ್ದಾರೆ.
ಇದನ್ನು ಓದಿ : ಭಟ್ಕಳದಲ್ಲಿ ಮೂವರು ಯುವಕರಿಂದ ಓರ್ವನ ಮೇಲೆ ಚಾಕುವಿನಿಂದ ಹಲ್ಲೆ
ಶಿಫಾನಾ ಬೇಗಂ ಕಲ್ಲೂರ್‌ಗೆ ಡಾಕ್ಟರೇಟ್ ಪದವಿ ಪ್ರದಾನ
ಫೆಬ್ರವರಿ 28ರಂದು ಉದಯೊನ್ಮುಖ ಪ್ರತಿಭೆಯ ಪ್ರತ್ಯರ್ಥ ಸಿನೆಮಾ ಬಿಡುಗಡೆ.
