ಕಾರವಾರ(KARWAR) : ಸ್ಥಾಯಿ ಸಮಿತಿ(STANDING COMITEE) ಅಧ್ಯಕ್ಷ ಸ್ಥಾನಕ್ಕೆ ನಿಷ್ಠಾವಂತ ಕಾರ್ಯಕರ್ತರನ್ನ ಕಡೆಗಣಿಸಿ ಬೇರೊಬ್ಬರನ್ನ ಆಯ್ಕೆ ಮಾಡಲು ಮುಂದಾದ ಬಿಜೆಪಿಗೆ ಕಾಂಗ್ರೆಸ್ಸಿಗರೇ ಪರಿಶಿಷ್ಟ ಜಾತಿಯ ಬಿಜೆಪಿ(BJP) ಸದಸ್ಯೆಯೊಬ್ಬರನ್ನ ಆಯ್ಕೆ ಮಾಡಿ ಟಾಂಗ್ ನೀಡಿದ ಘಟನೆ ಕಾರವಾರ ನಗರಸಭೆಯಲ್ಲಿ ನಡೆದಿದೆ.
ಶನಿವಾರ ಮಧ್ಯಾಹ್ನ ನಗರಸಭೆ ಸಭಾಭವನದಲ್ಲಿ ಸ್ಥಾಯಿ ಸಮಿತಿ ರಚನೆಯಾಗಬೇಕಿತ್ತು. ಬಿಜೆಪಿ ಬಹುಮತದಿಂದ ಅಧ್ಯಕ್ಷ ಉಪಾಧ್ಯಕ್ಷರಾಗಿದ್ದರಿಂದ ಸ್ಥಾಯಿ ಸಮಿತಿ ರಚನೆ ಸುಲಭ ಎಂದು ಬಿಜೆಪಿಯ ಕೆಲ ಸದಸ್ಯರು ತಿಳಿದಿದ್ದರು. ಆದರೆ ಬಿಜೆಪಿಗೆ ಬಹುಮತ ಇದ್ದರೂ ಹಿನ್ನಡೆಯಾಗಿದೆ.
ಆರಂಭದಲ್ಲಿ ಅಧ್ಯಕ್ಷರಾಗಿರುವ ರವಿರಾಜ್ ಅಂಕೋಲೆಕರ್ ಅವರು ಸ್ಥಾಯಿ ಸಮಿತಿಯ ಅಧ್ಯಕ್ಷ ಆಕಾಂಕ್ಷಿ ಯಾರೆಂದು ಪ್ರಸ್ತಾಪಿಸಿದಾಗ ಬಿಜೆಪಿಯ ಮಾಲಾ ಹುಲುಸ್ವಾರ ತಾನು ಪರಿಶಿಷ್ಟ ಜಾತಿಯವಳು ಸ್ಥಾನಕ್ಕೆ ಆಕಾಂಕ್ಷಿ ಎಂದರು. ರೋಷನಿ ಮಾಳ್ಸೆಕರ್ ಮಾಲಾಗೆ ಬೆಂಬಲ ನೀಡಿದರು. ಇದಕ್ಕೆ ಬಿಜೆಪಿಯ ಕೆಲ ಸದಸ್ಯರು ಆಕ್ಷೇಪಿಸಿದರು. ಆಗ ಕಾಂಗ್ರೆಸ್ ನ(CONGRES) ಎಲ್ಲಾ ಸದಸ್ಯರು ಬಿಜೆಪಿ ಸದಸ್ಯೆ ಮಾಲಾ ಅವರನ್ನೇ ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಡುವಂತೆ ಪಟ್ಟು ಹಿಡಿದರು.
ಸುಮಾರು ತಾಸುಗಳ ಕಾಲ ಇದೇ ವಿಚಾರದಲ್ಲಿ ಪರ ವಿರೋಧದ ಚರ್ಚೆಯು ನಡೆಯಿತು. ಬಿಜೆಪಿ ಕಾಂಗ್ರೆಸ್(BJP CONGRES) ಸದಸ್ಯರ ನಡುವೆ ಭಾರಿ ಮಾತಿನ ಚಕಮಕಿ ನಡೆಯಿತು. ಕೊನೆಗೂ ಕೈ ಸದಸ್ಯರ ಬೆಂಬಲದಿಂದ ಬಿಜೆಪಿ ಸದಸ್ಯೆ ಮಾಲಾ ಹುಲಸ್ವಾರ ಸ್ಥಾಯಿ ಸಮಿತಿ ಅಧ್ಯಕ್ಷರಾದರು.
ಬಿಜೆಪಿಯ ಸದಸ್ಯರಿಗೆ ಇದರಿಂದ ಮುಖಭಂಗವಾಯಿತು. ಕೊನೆಗೆ ಕಾಂಗ್ರೆಸ್ ಸದಸ್ಯರು ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಲಾ ಹುಲುಸ್ವಾರ ಅವರನ್ನ ಅಭಿನಂದಿಸಿದರು. ಮಾಜಿ ಅಧ್ಯಕ್ಷರಾದ ನಿತಿನ್ ಪಿಕಳೆ, ಗಣಪತಿ ನಾಯ್ಕ, ಉಪಾಧ್ಯಕ್ಷ ಪ್ರಕಾಶ್ ನಾಯ್ಕ, ರಾಜೇಶ್ ಮಾಜಾಳಿಕರ್, ಮಕಬುಲ್ ಶೇಕ್, ಪ್ರೇಮಾನಂದ ಗುನಗ ಸೇರಿದಂತೆ ಇತರರು ಸಾಕ್ಷಿಯಾಗಿದ್ದರು.
ಇದನ್ನು ಓದಿ : ಗೋವಾ ಗಡಿಯಲ್ಲಿ ಜಲಯುದ್ಧ
ಲೋಕಾಯುಕ್ತ ಎಡಿಜಿಪಿ ಮೇಲೆ ಕ್ರಮಕ್ಕೆ ಜೆಡಿಎಸ್ ಆಗ್ರಹ
ಪ್ರಯಾಣಿಕರ ಗಮನಕ್ಕೆ. ಯಶವಂತಪುರ ಕಾರವಾರ ವಿಶೇಷ ರೈಲು.
ಅಗಲಿದ ನಾಯಕರಿಗೆ ಕಾರವಾರದಲ್ಲಿ ಶೃದ್ದಾಂಜಲಿ
ಅತ್ಯುತ್ತಮ ಶಿಕ್ಷಕಿಗೆ ಗುನಗಿ ಸಂಘದಿಂದ ಸನ್ಮಾನ