ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ (Bhatkal) : ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಅತ್ಯಂತ ದೊಡ್ಡ ಜಾತ್ರೆಗಳಲ್ಲೊಂದಾದ ಭಟ್ಕಳ ತಾಲೂಕಿನ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ(Sodigadde Sri Mahasati Devi) ಜಾತ್ರೆಯ ಎರಡನೇ ದಿನ ಭಕ್ತರು  ಸಂಪ್ರದಾಯದ ಕೆಂಡ ಸೇವೆ(Traditional Kenda Seva) ಮಾಡುವ ಮೂಲಕ ಹರಕೆ ತೀರಿಸಿದರು.

ಅನಾದಿ ಕಾಲದ  ಶಕ್ತಿಕ್ಷೇತ್ರವಾದ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರಾ ಮಹೋತ್ಸವವೂ ಗುರುವಾರ ಜನವರಿ 23ರಿಂದ ವಿಜೃಂಭಣೆಯಿಂದ ಆರಂಭವಾಗಿದೆ. ಮೊದಲ ದಿನ ಹಾಲಹಬ್ಬ ಆಚರಿಸಿದ ಭಕ್ತರು, 2ನೇ ದಿನವಾದ ಶುಕ್ರವಾರ ಸಂಪ್ರದಾಯದ ಕೆಂಡಸೇವೆ ಹರಕೆಯಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು.

ಸಾವಿರಾರು ಭಕ್ತರು ಕೆಂಡದ ಮೇಲೆ ನಡೆಯುವ ಮೂಲಕ ಭಕ್ತಿಯ ಪರಕಾಷ್ಠೆ ಮೆರೆದರು.  ದೇವಸ್ಥಾನದ ಮುಂಭಾಗದ ಪ್ರಾಂಗಣದಲ್ಲಿ ಸಿದ್ದಪಡಿಸಿದ ಆಳೆತ್ತರದ ಕಟ್ಟಿಗೆ ರಾಶಿಯಿಂದಾಗುವ ಕೆಂಡವನ್ನು ಹಾಯುವುದು ಕೂಡ ರೋಮಾಂಚನಾಕಾರಿ.  ತಮ್ಮ ಕಷ್ಟ ಪರಿಹಾರವಾದಲ್ಲಿ ದೇವಿಗೆ ಕೆಂಡಸೇವೆ ಸಲ್ಲಿಸುವುದಾಗಿ  ಭಕ್ತರು ಹೇಳಿಕೊಳ್ತಾರೆ
ಬೇಡಿಕೆ ಈಡೇರಿದ ಮೇಲೆ ಕೆಂಡದ ಮೇಲೆ ನಡೆಯುವ ಮೂಲಕ ಶ್ರದ್ದಾಭಕ್ತಿಯಿಂದ ಹರಕೆ ತೀರಿಸುತ್ತಾರೆ.

ತಾಯಿ ಮಹಾಸತಿ ಭಕ್ತರ ಎಲ್ಲ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸುತ್ತಾಳೆ.  ಹೀಗಾಗಿ ಜಾತ್ರೆಯಲ್ಲಿ ಕೆಂಡ ಸೇವೆ ಪ್ರಧಾನವಾಗಿದೆ. ತಮ್ಮ ಕುಟುಂಬಕ್ಕಾಗಲಿ, ವೈಯಕ್ತಿಕವಾಗಲಿ, ಯಾವುದೇ ಕಷ್ಟಬಾರದಿರಲಿ ಎಂದು ಬೇಡಿಕೊಳ್ಳುತ್ತಾರೆ.

ಕ್ಷೇತ್ರದ ಮತ್ತೊಂದು ವಿಶೇಷವೆಂದರೆ ದೇವರಿಗೆ ಗೊಂಬೆ ಅರ್ಪಿಸುವುದು. ಗಜ ಗೊಂಬೆ, ನೆಲಗೊಂಬೆ ಹೀಗೆ ಕಷ್ಟಕಾಲದಲ್ಲಿ ದೇವರು ರಕ್ಷಿಸಿ ಕೈ ಹಿಡಿದಿದ್ದಕ್ಕೆ ಭಕ್ತರು ಗೊಂಬೆ ಅರ್ಪಿಸುತ್ತಾರೆ.

ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ದೇವಸ್ಥಾನ ದಿನದಿಂದ ದಿನಕ್ಕೆ  ರಾಜ್ಯದ್ಯಂತ  ಹೆಸರುವಾಸಿಯಾಗಿದ್ದು ಜಾತ್ರೆಯ ಸಂದರ್ಭದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ಆರ್ಶೀವಾದ ಪಡೆಯುತ್ತಾರೆ,

ಜಾತ್ರೆಯ ಕೆಂಡ ಸೇವೆಗೆ, ಬರುವಂತಹ ಎಲ್ಲ ಭಕ್ತರಿಗೆ ದೇವಸ್ಥಾನದಲ್ಲಿ ಸಾಕಷ್ಟು ಸ್ವಯಂ ಸೇವಕರು ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಿದ್ದು, ಭಕ್ತರಿಗಾಗಿ ಮಜ್ಜಿಗೆ, ಪಾನಕವನ್ನು ವಿತರಿಸಿದ್ದಾರೆ. ಇನ್ನು ಹರಕೆ ತೀರಿಸಿದ ಸಾವಿರಾರು ಭಕ್ತರು ದೇವಿಯ ಆರ್ಶೀವಾದ ಪಡೆದರು. ಇನ್ನು ಈ ಜಾತ್ರೆ ಜನವರಿ 31ರವರೆಗೆ ನಡೆಯಲಿದೆ.

ಇದನ್ನು ಓದಿ : ವಿದ್ಯಾರ್ಥಿ ಬ್ಯಾಗ್ ನಲ್ಲಿ ದೇಶಿ ನಿರ್ಮಿತ ಬಾಂಬ್.

ಪ್ರಸಿದ್ಧ ಮಾಜಿ ಕ್ರಿಕೆಟಿಗನ ದಾಂಪತ್ಯದಲ್ಲಿ ಬಿರುಕು.

ಹೊನ್ನಾವರ ಗೋ ಕಳ್ಳತನ ಮಾಡುತ್ತಿದ್ದ ಮೂವರಿಗೆ ಹೆಡೆಮುರಿ ಕಟ್ಟಿದ ಪೊಲೀಸರು.

ಸೋಡಿಗದ್ದೆ ಶ್ರೀ ಮಹಾಸತಿ ದೇವಿಗೆ ಜಾತ್ರೆಯ ಸಂಭ್ರಮ