ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news) ಕಾರವಾರ(Karwar) : ಕಾರವಾರ-ಅಂಕೋಲಾ ನೀರು ಸರಬರಾಜು ವ್ಯವಸ್ಥೆಯಡಿಯಲ್ಲಿ ಅಗಸೂರು ಬ್ರಿಡ್ಜ ಬಳಿ 711 ಮೀ.ಮಿ ವ್ಯಾಸದ ಕೊಳವೆಯಲ್ಲಿ ಸೆ.24 ರಂದು ಸೋರುವಿಕೆ ಉಂಟಾಗಿದ್ದು, ಕೊಳವೆ ಜೋಡಣೆ ಮತ್ತು ದುರಸ್ತಿ ಕಾಮಗಾರಿಯನ್ನು
ಕೈಗೊಳ್ಳಲಾಗುತ್ತಿದೆ.

ಹೀಗಾಗಿ ಸೆ. 26 ರಂದು ಕಾರವಾರ-ಅಂಕೋಲಾ ಮತ್ತು ಮಾರ್ಗದ ಮಧ್ಯದ ಹಳ್ಳಿಗಳಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕನನೀಸ ಮತ್ತು ಒಳ ಚರಂಡಿ ಮಂಡಳಿ ಕಾರವಾರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.