ಶಿರಸಿ(Sirsi) : ಜಿಂಕೆ ಬೇಟೆಯಾಡಿದ ಮೂವರು ಕಾಡು ಪ್ರಾಣಿ ಬೇಟೆಗಾರರಲ್ಲಿ ಓರ್ವನನ್ನು ಅರಣ್ಯ ಇಲಾಖೆ(Forest Department) ಅಧಿಕಾರಿ ಮತ್ತು ಸಿಬ್ಬಂದಿಗಳು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಜಿಂಕೆಯ(Deer) ಮೃತ ದೇಹವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಶಿರಸಿ ತಾಲೂಕಿನ (Sirsi Taluku) ಉಂಚಳ್ಳಿ ಗ್ರಾಮದ (Unchalli Village) ಹೊಳೆಯ ಪಕ್ಕ ನಡೆದ ಘಟನೆ ಇದಾಗಿದೆ. ಉಂಚಳ್ಳಿ ಗ್ರಾಮದ ಗಣಪತಿ ಮಂಜುನಾಥ ಗೌಡಾ ಬಂದಿತ ಆರೋಪಿ. ಇನ್ನುಳಿದ ಆರೋಪಿಗಳಾದ ಉಂಚಳ್ಳಿಯ ವೆಂಕಟೇಶ ನಾರಾಯಣ ನಾಯ್ಕ ಹಾಗೂ ಗಣೇಶ ಸುಬ್ರಾಯ ನಾಯ್ಕ ತಲೆಮರೆಸಿಕೊಂಡಿದ್ದಾರೆ.

ಶಿರಸಿ ವಿಭಾಗದ(Sirsi Division) ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ. ಅಜ್ಜಯ್ಯ ಜಿ ಆರ್ ಹಾಗೂ ಉಪ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿಗಳಾದ ಎಸ್ ಎಸ್ ನಿಂಗಾಣಿ ಮಾರ್ಗದರ್ಶನ ಮತ್ತು ಶಿರಸಿ ವಲಯ ಅರಣ್ಯಾಧಿಕಾರಿ ಗಿರೀಶ ಎಲ್ ನಾಯ್ಕ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಇದನ್ನು ಓದಿ : ರೈಲಿಗೆ ಅಡ್ಡ ಬಂದು ವ್ಯಕ್ತಿ ಸಾವು

ಗೋಕರ್ಣದಲ್ಲಿ ಸಿಡಿಲು ಬಡಿದು ನಾಲ್ವರಿಗೆ ಗಾಯ

ಮನೆಯಲ್ಲಿ ಸಂಗ್ರಹಿಸಿದ ಮದ್ಯ ವಶಕ್ಕೆ

ಮದುವೆ ಮಂಟಪದಲ್ಲಿ ಕಳ್ಳತನ