ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮಂಗಳೂರು (Manglore) : ಬೀಚ್ ಪ್ರವಾಸಕ್ಕೆ ಬಂದ ಮೂವರು ಪ್ರವಾಸಿಗರು ನೀರುಪಾಲಾದ ಘಟನೆ ಮಂಗಳೂರು (manglore) ಹೊರವಲಯದ ಕುಳಾಯಿ(Kulai) ಬಳಿಯ ಹೊಸಬೆಟ್ಟು ಬೀಚ್ (Hosabettu Beach) ಬಳಿ ನಡೆದಿದೆ
ಘಟನೆಯಲ್ಲಿ ಓರ್ವನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ. ಚಿತ್ರದುರ್ಗದ(Chitradurga) ಮಂಜುನಾಥ್ ಎಸ್, ಶಿವಮೊಗ್ಗದ(Shivamogga) ಶಿವಕುಮಾರ್, ಬೆಂಗಳೂರಿನ (Bangalore) ಸತ್ಯವೇಲು, ಮಂಜುನಾಥ್ ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ. ಬಂದಿದ್ದರು. ಬೀದರ್ ನ (Bidar) ಪರಮೇಶ್ವರ್ (30) ರಕ್ಷಣೆಗೊಳಗಾದವನು.
ಬೆಂಗಳೂರಿನಿಂದ ಇಂಜಿನಿಯರಿಂಗ್ ಕೆಲಸದ ಕಾರಣಕ್ಕೆ ನಾಲ್ವರು ಮಂಗಳೂರಿಗೆ ಬಂದಿದ್ದರು. ಬೀಚ್ ನಲ್ಲಿ ಈಜಬೇಡಿ ಎಂದು ಕರಾವಳಿ ಕಾವಲು ಪಡೆ ಪೊಲೀಸ್ ಎಚ್ಚರಿಕೆ ಕೊಟ್ಟರೂ ಕ್ಯಾರೇ ಮಾಡಿರಲಿಲ್ಲ ಎನ್ನಲಾಗಿದೆ.. ಕುಳಾಯಿಯ ನಿರ್ಮಾಣ ಹಂತದ ಮೀನುಗಾರಿಕಾ ಜೆಟ್ಟಿಯಿಂದ ಸಮುದ್ರಕ್ಕೆ ಹಾರಿದ್ದರು. ಈ ವೇಳೆ ನಾಲ್ವರೂ ನೀರಿನ ಹೊಡೆತಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದಾರೆ. ಸಮುದ್ರ ಬದಿಯಲ್ಲಿ ಬಲೆ ಹಾಕುತ್ತಿದ್ದ ಮೀನುಗಾರರಿಂದ ಓರ್ವನ ರಕ್ಷಣೆ ಮಾಡಲಾಗಿದೆ.
ಸುರತ್ಕಲ್ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮೂವರ ಮೃತದೇಹವನ್ನ ಸ್ಥಳೀಯ ಮೀನುಗಾರರ ಸಹಾಯದಿಂದ ಮೇಲಕ್ಕೆ ಎತ್ತಲಾಗಿದೆ.
ಇದನ್ನು ಓದಿ : ರಾಜ್ಯದಲ್ಲಿ ನಕ್ಷಲರ ಹೋರಾಟ ಅಂತ್ಯ. ಸಿಎಂ ಮುಂದೆ ಆರು ನಕ್ಷಲರು ಶರಣು.
ನಾನು ಯಾರೊಂದಿಗೂ ಓಡಿ ಹೋಗಿಲ್ಲ. ಪೊಲೀಸ್ ಠಾಣೆಯಲ್ಲಿ ಮಹಿಳೆ ಪ್ರತ್ಯಕ್ಷ.