ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು (Bangalore) : ಇಡೀ ದೇಶದಲ್ಲಿ 180ಕ್ಕೂ ಹೆಚ್ಚು ಕಳ್ಳತನ ನಡೆಸಿದ್ದ ಮೋಸ್ಟ್ ವಾಂಟೆಡ್(Most Wanted) ಕಳ್ಳನೋರ್ವನನ್ನು ಬೆಂಗಳೂರಿನ ಮಡಿವಾಳ ಪೊಲೀಸರು(Bangalore Madiwal Police) ಬಂಧಿಸಿದ್ದಾರೆ.

ಸೊಲ್ಲಾಪುರ ಮೂಲದ(Sollapura Native) ಪಂಚಾಕ್ಷರಿ ಸ್ವಾಮಿ (37) ಬಂಧಿತ ಕುಖ್ಯಾತ ಕಳ್ಳ. ಈತ ಎಲ್ಲೆಂದರಲ್ಲಿ ಕದ್ದ ಹಣದಿಂದಲೇ ತನ್ನ ಪ್ರೇಯಸಿಗೆ ಸುಮಾರು 3 ಕೋ. ರೂ. ಬೆಲೆಬಾಳುವ ಮನೆ ಕಟ್ಟಿಸಿಕೊಟ್ಟಿದ್ದಾನಂತೆ. ಈತನ ಪ್ರೇಯಸಿ ಅಂತಿಂಥವಳಲ್ಲ ಖ್ಯಾತ ನಟಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿ ಪಂಚಾಕ್ಷರಿ ಸ್ವಾಮಿಗೆ ಮದುವೆಯಾಗಿ ಮಗುವಿದ್ದರೂ ಬೇರೆ ಯುವತಿಯರ ಹಿಂದೆ ಸುತ್ತಾಡುವ ಶೋಕಿ. ಇದಕ್ಕಾಗಿ ಕಳ್ಳತನ ಮಾಡುವುದನ್ನ ಖಯಾಲಿಯಾಗಿಸಿಕೊಂಡಿದ್ದ.

ಈತ ಅಪ್ರಾಪ್ತ ವಯಸ್ಕನಿದ್ದಾಗಲೇ ಕಳ್ಳತನ ಆರಂಭಿಸಿದ್ದ. 2009ರಿಂದ ಪ್ರೊಫೆಷನಲ್ ಕಳ್ಳನಾಗಿದ್ದಾನೆ. 2014ರಲ್ಲಿ ಪ್ರಖ್ಯಾತ ನಟಿಯೊಬ್ಬಳ ಜೊತೆಗೆ ಸಂಬಂಧದಲ್ಲಿದ್ದೆ ಆಕೆಗಾಗಿ ಕೋಟಿ ಕೋಟಿ ಖರ್ಚು ಮಾಡಿದ್ದೇನೆ. 2016ರಲ್ಲಿ ಕೊಲ್ಕತ್ತದಲ್ಲಿ 3 ಕೋಟಿ ರೂ. ಖರ್ಚು ಮಾಡಿ ಮನೆ ಕಟ್ಟಿಸಿಕೊಟ್ಟಿದ್ದೇನೆ. ಆಕೆಯ ಬರ್ತ್‌ಡೇಗೆ 22 ಲಕ್ಷ ರೂ. ಮೌಲ್ಯದ ಅಕ್ವೆರಿಯಂ ಗಿಫ್ಟ್ ಕೊಟ್ಟಿದ್ದೇನೆ ಎಂದು ಆರೋಪಿ ಪೊಲೀಸರ ಬಳಿ ಬಾಯಿಬಿಟ್ಟಿದ್ದಾನೆ.

2016ರಲ್ಲಿ ಗುಜರಾತ್ ಪೊಲೀಸರು(Gujarat Police) ಈತನನ್ನು ಬಂಧಿಸಿ ಜೈಲಿಗಟ್ಟಿದ್ದರು. 6 ವರ್ಷ ಗುಜರಾತ್ ಸಬರಮತಿ ಜೈಲಿನಲ್ಲಿದ್ದ ಪಂಚಾಕ್ಷರಿ ಸ್ವಾಮಿ ಹೊರಬಂದು ಮತ್ತೆ ಕಳ್ಳತನ ಮಾಡಲು ಆರಂಭಿಸಿದ್ದ. ಮಹಾರಾಷ್ಟ್ರ ಪೊಲೀಸರು (Maharastra Police) ಅವನನ್ನು ಮತ್ತೊಮ್ಮೆ ಬಂಧಿಸಿದ್ದರು. ಅಲ್ಲೂ ಜೈಲಿನಿಂದ ಬಿಡುಗಡೆಯಾಗಿ 2024ರಲ್ಲಿ ಬೆಂಗಳೂರಿನಲ್ಲಿ ಮತ್ತೆ ಕಳ್ಳತನ ಶುರುಮಾಡುತ್ತಿದ್ದ. ಕಳೆದ ಜನವರಿ 9ರಂದು ಮಡಿವಾಳದಲ್ಲಿ ಮನೆ ಕಳ್ಳತನ ಮಾಡಿದ್ದ. ಈ ಪ್ರಕರಣದಲ್ಲಿ ಬಂಧಿಸಿದಾಗ ವಿಚಾರಣೆ ವೇಳೆ ಈತನ ಮೇಲೆ 180ಕ್ಕೂ ಹೆಚ್ಚು ಕಳ್ಳತನ ಪ್ರಕರಣ ದಾಖಲಾಗಿರುವುದು ಗೊತ್ತಾಗಿದೆ. ಗುಜರಾತ್, ಮಹಾರಾಷ್ಟ್ರದಲ್ಲಿ ಕಳ್ಳತನ ಮಾಡುತ್ತಿದ್ದಾಗ ಸಿಕ್ಕಿಬೀಳದಂತೆ ಮಾಡಲು ರಸ್ತೆಯಲ್ಲಿ ಶರ್ಟ್ ಬದಲಿಸುವುದು ಮುಂತಾದ ತಂತ್ರಗಳನ್ನು ಅನುಸರಿಸುತ್ತಿದ್ದ. ಚಿನ್ನಾಭರಣ ಕರಗಿಸಲು ಫೈರ್ ಗನ್ ಇಟ್ಟುಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನು ಓದಿ : ಸಿನಿಮಾ ಅವಕಾಶ ಬಂದರೂ ನಿರಾಕರಿಸುತ್ತಿರುವ ಬಿಗ್ ಬಾಸ್ ವಿನ್ನರ್ ಹನುಮಂತ

ಕಾರು ಮತ್ತು ಟಿಪ್ಪರ್ ನಡುವೆ ಅಪಘಾತ. ಹಾರಿ ಬಿದ್ದು ಚಾಲಕ ಮೃತ.

“ನೀ ಬರೆಸಿದಂತೆ” ಹಣವನ್ನ ಕ್ಯಾನ್ಸರ್ ರೋಗಿಗಳಿಗೆ ನೀಡಿ ಮಾದರಿಯಾದ ದಂಪತಿ.

ಕಾರವಾರದಲ್ಲಿ ಎಎಸ್‌ಐ ಮನೆಗೆ ಕನ್ನ ಹಾಕಿದ ಕಳ್ಳರು.