ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ತಮಿಳುನಾಡು(Tamilunadu) : 2020ರ ಕೊರೋನಾ(Corona) ಕಾಲದಲ್ಲಿ ನಡೆದ ಲಾಕ್ ಅಪ್ ಡೆತ್(Lockup Death) ಪ್ರಕರಣಕ್ಕೆ  ಸಂಬಂಧಿಸಿದಂತೆ  ಒಂಬತ್ತು ಪೊಲೀಸರಿಗೆ ಮಧುರೈ ಜಿಲ್ಲಾ ನ್ಯಾಯಾಲಯ (Madurai District Court) ಮರಣದಂಡನೆ (Death Sentence) ಶಿಕ್ಷೆ ವಿಧಿಸುವ ಮೂಲಕ ಮಹತ್ವದ ಆದೇಶ ನೀಡಿದೆ.

ತಮಿಳುನಾಡಿನಲ್ಲಿ(Tamilunadu) 2020ರಲ್ಲಿ ಕೋವಿಡ್(Covid) ಮಹಾಮಾರಿ ಒಕ್ಕರಿಸಿದ ಸಂದರ್ಭದಲ್ಲಿ ಅವಧಿ ಮೀರಿ ಅಂಗಡಿ ತೆರೆದಿದ್ದ ಕಾರಣಕ್ಕೆ ಮಾಲೀಕ ಜಯರಾಜ್(59) ಮತ್ತು ಅವರ ಮಗ ಜೆ. ಬೆನ್ನಿಕ್ಸ್(31) ಎಂಬುವವರನ್ನು ತಮಿಳುನಾಡಿನ ತೂತುಕುಡಿ(Tamilunadu tootukudi) ಜಿಲ್ಲೆಯ ಸಾಥನ್‌ಕುಲಂ ಪೊಲೀಸರು (Sathankulam Police) ಠಾಣೆಗೆ ಕರೆತಂದು ರಾತ್ರಿಯಿಡೀ ಹಲ್ಲೆ ನಡೆಸಿದ್ದರು. ಇದರಿಂದಾಗಿ ಕಸ್ಟಡಿಯಲ್ಲಿದ್ದ ವೇಳೆ ಅವರಿಬ್ಬರೂ ಮೃತಪಟ್ಟಿದ್ದರು. ಪ್ರಕರಣ ಇಡೀ ದೇಶಾದ್ಯಂತ ಸದ್ದು ಮಾಡಿತ್ತು.

ಎಲ್ಲೆಡೆ ವ್ಯಾಪಕ ಆಕ್ರೋಶ ಹೆಚ್ಚಾದ ಹಿನ್ನಲೆಯಲ್ಲಿ ಮದ್ರಾಸ್ ಹೈಕೋರ್ಟ್(Madras Highcourt) ನಿರ್ದೇಶನದ ಮೇರೆಗೆ, ರಾಜ್ಯದ ಸಿಬಿ-ಸಿಐಡಿ ಯಿಂದ ತನಿಖೆಯನ್ನು ಸಿಬಿಐಗೆ(CBI) ವಹಿಸಿತ್ತು. ಈ ಕುರಿತ ಸಮಗ್ರ ತನಿಖೆ ನಡೆಸಿದ ಸಿಬಿಐ 2,427 ಪುಟಗಳ ಚಾರ್ಜ್‌ಶೀಟ್ ಅನ್ನು ಮಧುರೈ ಜಿಲ್ಲಾ ನ್ಯಾಯಾಲಯಕ್ಕೆ(Madurai District Court) ಸಲ್ಲಿಸಿತ್ತು. ಅದರ ಆಧಾರದ ಮೇಲೆ ಬಂಧಿತರಾಗಿದ್ದ ಎಲ್ಲಾ 9 ಪೊಲೀಸರು ತಪ್ಪಿತಸ್ಥರೆಂದು ನ್ಯಾಯಾಧೀಶ ಜಿ ಮುತ್ತುಕುಮಾರನ್ ತೀರ್ಪು ನೀಡಿದ್ದರು. ಇಂದು ನ್ಯಾಯಾಲಯ ಗಲ್ಲು ಶಿಕ್ಷೆ (Death Sentence) ವಿಧಿಸಿ ಆದೇಶಿಸಿದೆ.

ಪ್ರಕರಣದಲ್ಲಿ ಓರ್ವ ಇನ್ಸ್‌ಪೆಕ್ಟ‌ರ್(Inspector), ಇಬ್ಬರು ಸಬ್-ಇನ್‌ಸ್ಪೆಕ್ಟರ್‌ಗಳು(Dub-Inspectors), ಉಳಿದಂತೆ ಕಾನ್‌ಸ್ಟೆಬಲ್‌ಗಳು(Constable’s) ಸೇರಿದ್ದಾರೆ. ಓರ್ವ ಆರೋಪಿ ಸಬ್‌ ಇನ್ಸ್‌ಪೆಕ್ಟ‌ರ್ ವಿಚಾರಣೆಯ ಸಮಯದಲ್ಲಿ ಕೊವಿಡ್-19ನಿಂದ ಮೃತಪಟ್ಟಿದ್ದರು. ಕಸ್ಟಡಿಯಲ್ಲಿದ್ದಾಗ ಪೂರ್ವನಿಯೋಜಿತವಾಗಿ ಪ್ಲಾನ್ ಮಾಡಿ ರಾತ್ರಿಯಿಡೀ ಚಿತ್ರಹಿಂಸೆಯನ್ನು ನೀಡಲಾಗಿದೆ ಎಂಬ ಕೇಂದ್ರ ತನಿಖಾ ವಳದ (ಸಿಬಿಐ) ವಾದವನ್ನು ನ್ಯಾಯಾಲಯ ಸ್ವೀಕರಿಸಿದೆ. ಹೀಗಾಗಿ, ಗರಿಷ್ಠ ಶಿಕ್ಷೆಯನ್ನು ಪ್ರಕರಣದಲ್ಲಿ ವಿಧಿಸಲಾಗಿದೆ.

ಇದನ್ನು ಓದಿ : ಜಲಪಾತ ನೋಡಲು ಬಂದ ಪ್ರವಾಸಿಗರು. ನೀರಿನಲ್ಲಿ ಮುಳುಗಿ ಓರ್ವ ಸಾವು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ. ಓರ್ವ ದುರ್ಮರಣ. ಇನ್ನೋರ್ವ ‌ಗಂಭೀರ.