ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಯಲ್ಲಾಪುರ(Yallapur) : ರಾಷ್ಟ್ರೀಯಹೆದ್ದಾರಿ ಯಲ್ಲಾಪುರ(NH Yallapur) ತಾಲೂಕಿನ ಅರಬೈಲ್ ಘಟ್ಟದಲ್ಲಿ(Arebail Ghat) ಚಾಲಕ ಸಮೇತ ಕಾರು ಸುಟ್ಟು ಕರಕಲಾದ ಘಟನೆ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ಹುಬ್ಬಳ್ಳಿ ಕಡೆಯಿಂದ ಅಂಕೋಲಾಕ್ಕೆ(Hubli to Ankola) ಬರುತ್ತಿದ್ದ ವೊಕ್ಸ್ ವ್ಯಾಗನ್ ಕಾರು(Volkswagen) ಈ ಅವಘಡಕ್ಕೆ ತುತ್ತಾಗಿದೆ. ಕಾರಿಗೆ ಬೆಂಕಿ ತಗುಲಿದ್ದರಿಂದ ಚಾಲಕನಿಗೆ ಕಾರಿನಿಂದ ಹೊರಬರಲು ಸಾಧ್ಯವಾಗಿಲ್ಲ. ದೇಹ ಸಂಪೂರ್ಣ ಸುಟ್ಟು ಕರಕಲಾಗಿ ಗುರುತು ಸಿಗದಂತಾಗಿದೆ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಹೆದ್ದಾರಿ 52ರಲ್ಲಿ(NH 52) ಘಟನೆ ನಡೆದಿದ್ದು, ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ದಳಕ್ಕೆ(Fire Brigade) ಮಾಹಿತಿ ನೀಡಿದ್ದಾರೆ. ಆದರೆ ಬೆಂಕಿಯ ತೀವ್ರತೆಯಿಂದ ಕಾರು ಸಂಪೂರ್ಣ ಸುಟ್ಟು ಹಾನಿಗೊಳಗಾಗಿದೆ.
ಯಲ್ಲಾಪುರ ಪೊಲೀಸರು(Yallapur Police) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಇದೇ ರೀತಿಯ ಘಟನೆ ಕೆಲ ತಿಂಗಳ ಹಿಂದೆ ಹೊನ್ನಾವರ(Honnavar) ತಾಲೂಕಿನ ಸುಳಿಮುರ್ಕಿ ಬಳಿ ನಡೆದು ಸಹೋದರರ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ತನಿಖೆಯನ್ನ ಪೊಲೀಸರು ಶುರು ಮಾಡಿದ್ದಾರೆ.
ಇದನ್ನು ಓದಿ : ಜಿಲ್ಲಾ ಮೀನು ಮಾರಾಟ ಫೆಡರೇಶನ್ ಚುನಾವಣೆ. ರಾಜು ತಾಂಡೇಲ ಅಭಿಮಾನಿ ಬಳಗದ ಬಹುತೇಕ ಸದಸ್ಯರ ಗೆಲುವು. ವಿಜಯೋತ್ಸವ.
ರನ್ ಔಟ್ ತೀರ್ಪಿಗೆ ಅಂಪೈರ್ ಫಿನಿಶ್. ಒಂದೇ ಒಂದು ರನ್ ಗೆ ಧಾರುಣ ಘಟನೆ.
