ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಶಿರಸಿ ನಗರದಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಆರೋಪಿತರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರಧ್ದಾನಂದಗಲ್ಲಿಯ ರಂಗನಾಥ ಮಡಗಾಂವಕರ ಕೊಲೆ ಆರೋಪಿತರಾದ ರಮೇಶ ಮಡಗಾಂವಕರ ಎಂಬಾತನಿಗೆ ಜೀವಾವಧಿ ಶಿಕ್ಷೆ ಹಾಗೂ ರೂ.25,000 ದಂಡ, 50,000 ಪರಿಹಾರ ನೀಡುವಂತೆ ಹಾಗೂ ಎರಡನೇ ಆರೋಪಿ ಸಾವಿತ್ರಿ ಮಡಗಾಂವಕರಗೆ 2,000 ದಂಡ ವಿಧಿಸಿ, ದೂರುದಾರಳಾದ ಶಕೂ ಇವಳಿಗೆ 2,000ಪರಿಹಾರ ನೀಡುವಂತೆ ಮತ್ತು ಹೆಚ್ಚಿನ ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪಡೆಯುಬಹುದು ಎಂದು ಶಿರಸಿಯ1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ನ್ಯಾಯಾಧೀಶರಾದ ಕಿರಣ ಕಿಣಿ ತೀರ್ಪು ನೀಡಿದ್ದಾರೆ.
ಶಿರಸಿ ನಗರ ಠಾಣಾ ವ್ಯಾಪ್ತಿಯ ಶ್ರಧ್ಧಾನಂದಗಲ್ಲಿಯ ಆರೋಪಿಗಳಾದ ರಮೇಶ ಗಜಾನನ ಮಡಗಾಂವಕರ ಹಾಗೂ ಆತನ ತಾಯಿ ಸಾವಿತ್ರಿ ಗಜಾನನ ಮಡಗಾಂವಕರ ಇಬ್ಬರು ಸೇರಿ ಆಸ್ತಿ ವಿಚಾರಕ್ಕೆ ಸಂಬಂಧಿಸಿ ಗಲಾಟೆ ಮಾಡಿದ್ದರು. ದಿ.7-12-2015 ರಂದು ಶಕೂ ಕೊಂ ನಾರಾಯಣ ಮಡಗಾಂವಕರ ಇವರೊಂದಿಗೆ ಮನೆಯ ಹಿಂಭಾಗದಲ್ಲಿ ಕಸ ಚೆಲ್ಲಿರುವ ವಿಚಾರವಾಗಿ ಜಗಳ ತೆಗೆದು ಅವ್ಯಾಚ ಶಬ್ದಗಳಿಂದ ಬೈಯುತ್ತಿರುವಾಗ ಮೃತ ರಂಗನಾಥ ತನ್ನ ತಾಯಿಗೆ ಏಕೆ ಬೈಯತ್ತಿರೆಂದು ಪ್ರಶ್ನಿಸಿದಾಗ ರಮೇಶ ಮಡಗಾಂವಕರ ರಂಗನಾಥನನ್ನು ರಸ್ತೆಗೆ ಎಳೆದೊಯ್ದು, ಕೆಡವಿ ನೆಲಕ್ಕೆ ಬಿಳಿಸಿ ಆತನ ಎದೆ ಮತ್ತು ಹೊಟ್ಟೆಯ ಮೇಲೆ ಬಲವಾಗಿ ತುಳಿದು, ಗುದ್ದಿ ರಸ್ತೆಗೆ ಜಜ್ಜಿದ ಪರಿಣಾಮವಾಗಿ ರಂಗನಾಥ ಮಡಗಾಂವಕರ ಪ್ರಜ್ಞಾಹೀನನಾಗಿದ್ದ. ಆರೋಪಿತರು ಮೃತನನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದರು. ಆಂಬುಲೇನ್ಸ್ ಸಹಾಯದಿಂದ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ರಂಗನಾಥ ಮೃತ ಪಟ್ಟಿದ್ದ.
ಶಿರಸಿ ನಗರ ಪೊಲೀಸ್ ಠಾಣೆಯ ಆಂದಿನ ತನಿಖಾಧಿಕಾರಿ ಆರ್.ಎಲ್.ಗಣಪತಿ ಆರೋಪಿತರನ್ನು ದಸ್ತಗಿರಿ ಮಾಡಿ ತನಿಖೆಗೊಳಪಡಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣಾ ಕಾಲಕ್ಕೆ ನಗರ ಠಾಣೆ ಹೆಚ್,ಸಿ ತುಕಾರಾಮ ಬಣಕಾರ ಸಾಕ್ಷಿದಾರರನ್ನು ಹಾಜರುಪಡಿಸಿ ಅಭಿಯೋಜನೆಗೆ ಸಹಕರಿಸಿದರು. ನಗರ ಠಾಣೆಯ ಪಿ.ಎಸ್.ಐ ನರಸಿಂಹಲು ಕೊರ್ಟ್ ಮಾನಿಟರಿಂಗ್ ಮಾಡಿ ವಿಚಾರಣೆಗೆ ಸಹಕರಿಸಿದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಆಭಿಯೋಜಕ ರಾಜೇಶ್ ಎಂ. ಮಳಗಿಕರ್ ಪ್ರಕರಣದ ವಿದ್ಯಮಾನಗಳನ್ನು ಮತ್ತು ಸಾಕ್ಷಿದಾರರ ಸಾಕ್ಷ್ಯವನ್ನು ಗಂಭೀರವಾಗಿ ತೆಗೆದುಕೊಂಡು ಆರೋಪಿತನಿಗೆ ಶಿಕ್ಷೆ ವಿಧಿಸಬೇಕೆಂದು ಸುದೀರ್ಘ ವಾದ ಮಂಡಿಸಿದ್ದರು.
ಇದನ್ನು ಓದಿ : ಮಗಳ ಮೇಲಿನ ಅತ್ಯಾಚಾರಕ್ಕೆ ರಣಚೆಂಡಿಯಾಗಿದ್ದ ತಾಯಿ. ಕಾಮುಕನನ್ನು ಹತ್ಯೆಗೈದಾಕೆ ಈಗ ನಿರಪರಾಧಿ.
ಒಬ್ಬಾಕೆಯನ್ನ ಮದುವೆಯಾಗಲು ಎರಡು ದಿಬ್ಬಣ ಬಂತು! ಮದುವೆ ಮನೆಯಲ್ಲಿ ಹೈಡ್ರಾಮಾ.

