ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ದಾಂಡೇಲಿ(Dandeli) : ನಿಯಂತ್ರಣ ತಪ್ಪಿದ ಕಾರೊಂದು ಮರಕ್ಕೆ ಢಿಕ್ಕಿ(Car Accident) ಹೊಡೆದ ಪರಿಣಾಮವಾಗಿ , ಇಬ್ಬರು ಸಾವನ್ನಪ್ಪಿದ ಘಟನೆ ದಾಂಡೇಲಿ(Dandeli) ತಾಲೂಕಿನ ಕರ್ಕಾ ಕ್ರಾಸ್–ಅಜಗಾಂವ ಬಳಿ ಸಂಭವಿಸಿದೆ.
ಧಾರವಾಡ ಮೂಲದ(Dharwad Native) ಫಾರೂಖ್ ಸಾಬ್, ಹಳಿಯಾಳದ ಮುದಸ್ಸಿರ್ ಇಸ್ಮಾಯಿಲ್ ಮುಲ್ಲಾ ಮೃತ ದುರ್ದೈವಿಗಳೆಂದು ಗುರುತಿಸಲಾಗಿದೆ.
ನಿನ್ನೆ ರಾತ್ರಿ ನಿಯಂತ್ರಣ ತಪ್ಪಿದ ಕಾರು(Car) ರಸ್ತೆ ಬದಿಯ ಮರಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಎರಡು ಮರಗಳ ನಡುವೆ ಕಾರು ಸಿಲುಕಿಕೊಂಡಿದೆ. ಪರಿಣಾಮವಾಗಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಒಟ್ಟು ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತದೇಹಗಳನ್ನು ಹಳಿಯಾಳ ತಾಲೂಕು ಆಸ್ಪತ್ರೆಗೆ(Haliyal Taluku Hospital) ರವಾನಿಸಲಾಗಿದೆ. ದಾಂಡೇಲಿ ಪೊಲೀಸರು(Dandeli Police) ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಇದನ್ನು ಓದಿ : ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾಗಿ ಪ್ರಶಾಂತ ತಾಂಡೇಲ, ಉಪಾಧ್ಯಕ್ಷರಾಗಿ ಪ್ರಮೋದ ಬಾನಾವಳಿಕರ ಅವಿರೋಧ ಆಯ್ಕೆ.
ವೈದ್ಯನ ಹತ್ಯೆ ಆರೋಪಿ ಬಂಧನ. 24 ಗಂಟೆಯೊಳಗೆ ಪ್ರಕರಣ ಭೇಧಿಸಿದ ಪೊಲೀಸರು






