ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) : ಕಾರವಾರ(Karwar) : ಗುಜರಾತಿನಿಂದ ಕೈಗಾ(Gujarat to Kaiga) ಕಡೆ ತೆರಳುತ್ತಿದ್ದ ಬೃಹತ್ ಯಂತ್ರ(Big Machinery) ಹೊತ್ತ ವಾಹನ ಸಮೀಪಿಸುವ  ಕೆಲವೇ ದೂರದಲ್ಲಿ ಪಲ್ಟಿಯಾಗಿ ಬಿದ್ದ ಘಟನೆ ಗುರುವಾರ ಸಂಭವಿಸಿದೆ.

ಕೈಗಾ ಅಣು ವಿದ್ಯುತ್ ಸ್ಥಾವರದ(Kaiga Nuclear Power Plant) 5 ಮತ್ತು 6ನೇ ಘಟಕಕ್ಕಾಗಿ ಗುಜರಾತ್‌ನಿಂದ ಬಂದ ಬೃಹತ್ ಯಂತ್ರೋಪಕರಣ ಹೊತ್ತಿದ್ದ ವಾಹನ ಇದಾಗಿದ್ದು  ಕೈಗಾ ಸಮೀಪದ ಹರ್ಟುಗಾ ಗ್ರಾಮದ(Hartuga Village) ಬಳಿ ಪಲ್ಟಿಯಾಗಿದೆ. ಘಟನೆಯಿಂದ ಮಲ್ಲಾಪುರ ಮತ್ತು ಕೈಗಾ(Mallapur  And Kaiga) ನಡುವಿನ ಸಂಚಾರ ಅಸ್ತವ್ಯಸ್ತವಾಗಿದೆ.

ಕೈಗಾ ಇನ್ನೆನೂ ಐದಾರು ಕಿಲೋಮೀಟರ್ ಬಾಕಿ ಇತ್ತು. ಹರ್ಟುಗಾ ಗ್ರಾಮದ ತಿರುವಿನಲ್ಲಿ ನಿಯಂತ್ರಣ ತಪ್ಪಿದ ವಾಹನ ರಸ್ತೆಯಂಚಿನ ಗುಂಡಿಗೆ ಅಡ್ಡಲಾಗಿ ಬಿದ್ದಿದೆ. ರಿಯಾಕ್ಟರ್ ಗೆ(Reactor) ಸಂಬಂಧಿಸಿದ ತುಂಬ ಮಹತ್ವದ ಭಾಗವಾಗಿದ್ದು‌  ಕಳೆದ ಫೆಬ್ರವರಿಯಲ್ಲಿ ಗುಜರಾತ್‌ನಿಂದ(Gujarat) ಹೊರಟಿತ್ತು.‌ ಕಳೆದ  ಏಪ್ರಿಲ್ 15 ರಂದು  ಕಾರವಾರ ನಗರದ(Karwar Town) ಮೂಲಕ‌ ಕೈಗಾ ಕಡೆ ತೆರಳಿತ್ತು. ತುಂಬಾ ಸೂಕ್ಷ್ಮವಾಗಿದ್ದರಿಂದ ಬಹಳ ಜಾಗರೂಕತೆಯಿಂದ,  ನಿಧಾನಗತಿಯಲ್ಲಿ ವಾಹನ‌ ಸಾಗುತಿತ್ತು.

ಗುರುವಾರ ಮಧ್ಯಾಹ್ನ  ರಸ್ತೆಯ ತಿರುವಿನಲ್ಲಿ ಅಡ್ಡಲಾಗಿ ಬಿದ್ದಿರುವುದರಿಂದ ಮಲ್ಲಾಪುರದಿಂದ ಕೈಗಾಕ್ಕೆ(Mallapur  to Kaiga) ಸಂಪರ್ಕಿಸುವ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಭಾರೀ ಗಾತ್ರದ ಯಂತ್ರವನ್ನು ಮರಳಿ ಯಥಾಸ್ಥಿತಿಗೆ ತರಲು ಮತ್ತು ರಸ್ತೆ ಸುಗಮಗೊಳಿಸಲು ತಾಂತ್ರಿಕ ತಂಡ ಮತ್ತು ಕ್ರೇನ್‌ಗಳ ನೆರವಿನಿಂದ ಎತ್ತಬೇಕಾಗಿದೆ. ಗುಜರಾತ್‌ನಿಂದ ಸಾವಿರಾರು ಕಿಲೋಮೀಟರ್ ಕ್ರಮಿಸಿ ಬಂದು ಹತ್ತಿರ ಹತ್ತಿರ ಇರುವಾಗಲೇ ಈ ರೀತಿಯಾಗಿ ಪಲ್ಟಿಯಾಗಿ ಬಿದ್ದಿರೋದು  ದುರ್ದೈವದ ಸಂಗತಿಯಾಗಿದೆ.

ಇದನ್ನು ಓದಿ : ಬಂಡೆಯ ಮೇಲೆ ನಿಂತವರಿಗೆ ಅಪ್ಪಳಿಸಿದ ಅಲೆ. ಭಟ್ಕಳದಲ್ಲಿ ಇಬ್ಬರ ಮೃತ್ಯು.