ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಬೆಂಗಳೂರು(Banglore) : ಇಂದು ಸೆಪ್ಟೆಂಬರ್ 28ರಿಂದ 30ರವರೆಗೆ ಮೂರು ದಿನಗಳ ಕಾಲ ನಡೆಯಬೇಕಿದ್ದ ಬ್ಯಾಂಕ್ ಮುಷ್ಕರ
ಕೊನೆ ಕ್ಷಣದಲ್ಲಿ ಮುಂದೂಡಲಾಗಿದೆ ಎಂದು ಬ್ಯಾಂಕ್ ಒಕ್ಕೂಟ ತಿಳಿಸಿದೆ.
ಹೀಗಾಗಿ ಇಂದು ಎಲ್ಲಾ ಬ್ಯಾಂಕ್ಗಳ(Banks) ಕಚೇರಿಗಳು ಎಂದಿನಂತೆ ಸಾಮಾನ್ಯವಾಗಿ ಕಾರ್ಯನಿರ್ವಹಿಸಲಿದೆ. ಭಾನುವಾರ ಸೆಪ್ಟೆಂಬರ್ 27ರಂದು ತಡರಾತ್ರಿ ಹೇಳಿಕೆ ಬಿಡುಗಡೆ ಮಾಡಿದ
ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಸೆಪ್ಟೆಂಬರ್ 28ರಿಂದ ಸೆಪ್ಟೆಂಬರ್ 30ರವರೆಗೆ ದೇಶಾದ್ಯಂತ ನಡೆಯಬೇಕಿದ್ದ ಬ್ಯಾಂಕ್ ಮುಷ್ಕರವನ್ನು (Bank Strike) ಮುಂದೂಡಲಾಗಿದೆ ಎಂದಿದೆ.
ಪ್ರತಿ ಶನಿವಾರವೂ ಬ್ಯಾಂಕ್ಗಳಿಗೆ ರಜೆ ಘೋಷಿಸುವ ಕುರಿತು ದೀರ್ಘಕಾಲದಿಂದ ಬ್ಯಾಂಕ್ ಒಕ್ಕೂಟಗಳು ಹೊಂದಿದ್ದ ಬೇಡಿಕೆಯ ಕುರಿತು ಭಾನುವಾರ ತಡರಾತ್ರಿ 9:30ರ ಸುಮಾರಿಗೆ ಬ್ಯಾಂಕ್ಗಳ ಒಕ್ಕೂಟ ಹಾಗೂ ಭಾರತೀಯ ಬ್ಯಾಂಕುಗಳ ಸಂಘ (IBA) ಸಭೆ ನಡೆಸಿದೆ. ಬೇಡಿಕೆಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲು ಒಪ್ಪಿಗೆ ಸಿಗುತ್ತಿದ್ದಂತೆ ಬ್ಯಾಂಕ್ ಒಕ್ಕೂಟಗಳು(Bank Union) ತಮ್ಮ ಉದ್ದೇಶಿತ 3 ದಿನಗಳ ರಾಷ್ಟ್ರವ್ಯಾಪಿ ಮುಷ್ಕರವನ್ನು ಮುಂದೂಡಿವೆ.
ಈ ಬಗ್ಗೆ ಮಾತನಾಡಿದ ಅಖಿಲ ಭಾರತ ಬ್ಯಾಂಕ್ (IBA) ಅಧಿಕಾರಿಗಳ ಒಕ್ಕೂಟದ ಅಧ್ಯಕ್ಷ ಆರ್. ಶೇಖರನ್, ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆಯ ಬೇಡಿಕೆಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲು IBA ಒಪ್ಪಿಕೊಂಡಿದೆ. ಈ ಉನ್ನತ ಮಟ್ಟದ ಸಮಿತಿಯಲ್ಲಿ ಬ್ಯಾಂಕ್ ಯೂನಿಯನ್ಗಳ ಯುನೈಟೆಡ್ ಫೋರಮ್ನ ಪ್ರತಿನಿಧಿಗಳು ಸಹ ಭಾಗವಾಗಿಯಾಗಲಿದ್ದು, ಎಲ್ಲಾ ಪಾಲುದಾರರೊಂದಿಗೆ ಸಮಾಲೋಚಿಸಿದ ನಂತರ ಸಮಿತಿಯು ಈ ಬೇಡಿಕೆಯ ಬಗ್ಗೆ ಚರ್ಚಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಹೀಗಾಗಿ ಇಂದಿನಿಂದ ಬ್ಯಾಂಕ್ಗಳು ಓಪನ್ ಇರಲಿದ್ದು, ಎಂದಿನಂತೆ ಸೇವೆಗಳು ಲಭಿಸಲಿವೆ. ಹಾಗಾಗಿ ಗ್ರಾಹಕರು ಎಂದಿನಂತೆ ಸಾಮಾನ್ಯವಾಗಿ ಬ್ಯಾಂಕ್ ಶಾಖೆಗಳಿಗೆ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದಾಗಿದೆ.
UFBU Statement/ ಮುಷ್ಕರ ವಾಪಸ್. ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಬ್ಯಾಂಕುಗಳು. UFBU ಹೇಳಿಕೆ.