ಗೋವಾ(GOA) : ಖೈದಿಯೊಬ್ಬ ಸ್ಯಾನಿಟೈಸರ್(SANITISER) ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ (SUCIDE ATTEMPT)ಘಟನೆ ಗೋವಾದ ಕೋಲ್ವಾ ಕಾರಾಗೃಹದಲ್ಲಿ (KOLVA JAIL) ನಡೆದಿದೆ.
ಘಟನೆಯಲ್ಲಿ ಖೈದಿಯ ಗಂಭೀರ ಸ್ಥಿತಿಗೆ ತಲುಪಿದ್ದು ಚಿಕಿತ್ಸೆಗಾಗಿ ಗೋವಾ ವೈದ್ಯಕೀಯ ಆಸ್ಪತ್ರೆ ಬಾಂಬೋಲೀಮ್ಗೆ(BAMBOLIUM) ದಾಖಲಿಸಲಾಗಿದೆ. ನಿನ್ನೆ ಗುರುವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಕಾರಾಗೃಹದ(JAIL) ಅಧಿಕಾರಿಗಳಿಂದ ಆಗುತ್ತಿದ್ದ ಹಿಂಸೆಯಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದನೆಂದು ಹೇಳಲಾಗುತ್ತಿದೆ.
ವಿಚಾರಣಧೀನ ಖೈದಿ(PRISONER) ರಾಜು ದಾಸ್ ಎಂಬಾತಾನೆ ಆತ್ಮಹತ್ಯೆಗೆ ಯತ್ನಿಸಿದವನಾಗಿದ್ದಾನೆ. ಈತನಿಗೆ ಇಲ್ಲಿನ ದವಾಖಾನೆಯಲ್ಲಿ ಕೆಲಸ ನೀಡಲಾಗಿತ್ತು. ಇದರಿಂದಾಗಿ ಈತ ಬೇಸರಗೊಂಡಿದ ಎನ್ನಲಾಗಿದೆ. ಈ ಕೆಲಸ ನನಗೆ ಬೇಡ ಎಂದು ಜೈಲು ಅಧಿಕಾರಿಗಳಿಗೆ ಹೇಳಿದ್ದ. ಗುರುವಾರ ಬೆಳಿಗ್ಗೆ ದವಾಖಾನೆಯಲ್ಲಿ ಖೈದಿಗಳ ತಪಾಸಣೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಈ ಖೈದಿಯು ಸ್ಯಾನಿಟೈಜರ್ ತೆಗೆದುಕೊಂಡು ಕೋಣೆಯೊಂದಕ್ಕೆ ಹೋಗಿ ಬಾಗಿಲು ಹಾಕಿಕೊಂಡು ಸ್ಯಾನಿಟೈಜರ್ ಕುಡಿದು ಮೈಮೇಲೆ ಕೂಡ ಹಾಕಿಕೊಂಡು ಬೆಂಕಿ ಹಚ್ಚಿಕೊಂಡ ಎಂಬ ಮಾಹಿತಿ ಲಭ್ಯವಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಕೋಲ್ವಾ ಪೋಲಿಸರು(KOLVA POLICE) ತನಿಖೆ ಕೈಗೊಂಡಿದ್ದಾರೆ.
ಇದನ್ನು ಓದಿ : ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಆಯುಧ ಪೂಜೆ ಸಂಭ್ರಮ
ಗ್ರಾಮೀಣ ಪ್ರದೇಶದಲ್ಲಿ ಕುಣಿಕೆ ಹಾಕಿ ಜಾನುವಾರು ಕದಿಯುವ ಖದೀಮರು
ಬಾಗಾ ಬೀಚಲ್ಲಿ ಪ್ರವಾಸಿ ಬೋಟ್ ಪಲ್ಟಿ
ಆನ್ ಲೈನ್ ವಂಚನೆ. ಪೊಲೀಸರ ಕಾರ್ಯದಿಂದ ಹಣ ವಾಪಾಸ್