ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ(Ankola): ಆಧುನಿಕ ಮನರಂಜನಾ ವೈವಿಧ್ಯತೆಗಳಿಂದಾಗಿ ಸಾಂಪ್ರದಾಯಿಕ ಮನೋರಂಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಇತ್ತೀಚಿಗೆ ಕಡಿಮೆಯಾಗುತ್ತಿದೆ. ತಾಲ್ಲೂಕಿನ ಹಿಚ್ಕಡ ಗ್ರಾಮದಲ್ಲಿ ಐವತ್ತು ವರ್ಷಗಳಿಂದ ನಡೆಯುತ್ತಿರುವ ವಾರ್ಷಿಕ ಯಕ್ಷಗಾನ (Yakshagana) ಪ್ರದರ್ಶನವು ಮಾದರಿಯ ಎನಿಸಿದೆ.

ಕರಾವಳಿಯ ಗಂಡು ಕಲೆ ಎಂದು ಕರೆಸಿಕೊಳ್ಳುವ ಯಕ್ಷಗಾನದ ಪ್ರದರ್ಶನವು 90ರ ದಶಕದಿಂದ ಆಚೆಗೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಗಟ್ಟಿಗೊಂಡಿತ್ತು. ದೃಶ್ಯ ಮತ್ತು ಶ್ರವಣ ಮಾಧ್ಯಮದ ಮೂಲಕ ಮನೋರಂಜನೆ, ಐತಿಹಾಸಿಕ ಮತ್ತು ಪೌರಾಣಿಕ ವಿಷಯದ ವಸ್ತುಗಳನ್ನು ಸುಲಭವಾಗಿ ಜನರಿಗೆ ತಲುಪಿಸಲು ಮತ್ತು ಸಾಂಘಿಕ ಭಾವನೆ ಪ್ರಚೋದನೆಗೊಳಿಸಲು ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ತಾಲೂಕಿನಲ್ಲಿ ಯಕ್ಷಗಾನದ (Yakshagana) ಪ್ರದರ್ಶನ ಯಥೇಚ್ಛವಾಗಿ ನಡೆದುಕೊಂಡು ಬರುತ್ತಿತ್ತು. ಕಳೆದ ಎರಡು ದಶಕದಿಂದ ನಡೆದ ಮಾಹಿತಿ ತಂತ್ರಜ್ಞಾನ ಕ್ರಾಂತಿ ಮತ್ತು ವಿದ್ಯುನ್ಮಾನ ದೃಶ್ಯ( Electronic Media) ಮಾಧ್ಯಮಗಳ ಮೂಲಕ ಸಾಂಪ್ರದಾಯಿಕ ಕಲೆಗಳು ಅಳಿವಿನಂಚಿಗೆ ತಲುಪಿವೆ. ಆದಾಗ್ಯೂ ತಾಲೂಕಿನಲ್ಲಿ ಭಜನಾ ಮಂಡಳಿ, ಸಾಂಸ್ಕೃತಿಕ ಒಕ್ಕೂಟ ಮತ್ತಿತರ ಸಂಘಟನೆಗಳಿಂದ ಯಕ್ಷಗಾನ ಪ್ರದರ್ಶನ ನಡೆಯುತ್ತಿರುವುದು ಶ್ಲಾಘನೀಯವಾಗಿದೆ.

ತಾಲ್ಲೂಕಿನ ಹಿಚ್ಕಡ ಗ್ರಾಮದಲ್ಲಿ(Hichkad Village) 50 ವರ್ಷಗಳಿಂದ ಊರ ನಾಗರಿಕರ ಮತ್ತು ಭಜನಾ ಮಂಡಳಿ ಸಹಯೋಗಿತ್ವದಲ್ಲಿ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗುತ್ತಿದೆ. ವಿಶೇಷವೆಂದರೆ ಗಣರಾಜ್ಯೋತ್ಸವದ ಅಂಗವಾಗಿ ಪ್ರತಿ ವರ್ಷ ಜನವರಿ 26ರಂದು ಇಲ್ಲಿನ ಬಸ್ ನಿಲ್ದಾಣದ ಎದುರಿನ ಬಯಲು ರಂಗಮಂದಿರದಲ್ಲಿ ಯಕ್ಷಪ್ರದರ್ಶನ ಆ ಯೋಜನೆಗೊಳ್ಳುತ್ತದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಖ್ಯಾತ ಯಕ್ಷಗಾನಪಟುಗಳು ಇಲ್ಲಿ ತಾಳಕ್ಕೆ ಹೆಜ್ಜೆ ಹಾಕಿ ಮೆಚ್ಚುಗೆಗಳಿಸಿದ್ದಾರೆ. ನಾಡವ(Nadava), ಮೀನುಗಾರ(F8shermans),  ನಾಮಧಾರಿ (Namadharui) ಮತ್ತು ಪರಿಶಿಷ್ಟ ಸಮುದಾಯದ(Scheduled Community) ಜನರು ಇರುವ ಈ ಗ್ರಾಮದಲ್ಲಿ ಪರಿಶಿಷ್ಟ ಸಮುದಾಯದ ಸಾಂಪ್ರದಾಯಿಕ ಭಜನಾ ಮಂಡಳಿಯ ಅಂಗವಾಗಿ ಈ ಹಿಂದೆ ಪ್ರತ್ಯೇಕವಾದ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗುತ್ತಿತ್ತು. ಗ್ರಾಮದ ಧಾರ್ಮಿಕ ಕಾರ್ಯಗಳಲ್ಲಿ ಎಲ್ಲ ಸಮುದಾಯದವರು ಒಂದಾಗಿ ಭಾಗಿಯಾಗುವುದರಿಂದ ಯಕ್ಷಗಾನದಲ್ಲಿಯೂ ಪ್ರತ್ಯೇಕತೆ ಬೇಡ ಎಂದು ಗ್ರಾಮದ ಹಿರಿಯರು ನಿರ್ಣಯಿಸಿದ ಪರಿಣಾಮವಾಗಿ ನಾಡವ ಸಮುದಾಯದ ಮುಂದಾಳತ್ವದಲ್ಲಿ ಪರಿಶಿಷ್ಟ ಸಮುದಾಯದ ಭಜನಾ ಮಂಡಳಿಯ ಅಂಗವಾಗಿ ಈಗ ಒಂದೇ ಯಕ್ಷಗಾನ ಪ್ರದರ್ಶನ ನಡೆಯುತ್ತಿದೆ.

ಇಲ್ಲಿನ ಯಕ್ಷಗಾನ ಪ್ರದರ್ಶನಕ್ಕೆ 50 ವರ್ಷ ತುಂಬಿದ ಹಿನ್ನೆಲೆ ಈ ವರ್ಷ ಜನವರಿ 24 ರಿಂದ ನಿರಂತರವಾಗಿ ಮೂರು ದಿನ ಯಕ್ಷಗಾನ ಉತ್ಸವ ಆಯೋಜಿಸಲಾಗಿದೆ. ಜನವರಿ 24ರಂದು ಪಾಂಚಜನ್ಯ ನಡೆದಿದೆ. ಜ.25 ರಂದು ಭಸ್ಮಾಸುರ ಮೋಹಿನಿ ಮತ್ತು ಜ.26 ರಂದು ಭೀಷ್ಮಾರ್ಜುನ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಜನವರಿ 26ರಂದು 50 ವರ್ಷಗಳಿಂದ ಇದೇ ವೇದಿಕೆಯಲ್ಲಿ ಯಕ್ಷಗಾನ ಪ್ರದರ್ಶಿಸಿದ 35ಕ್ಕೂ ಹಿರಿಯ ಕಲಾವಿದರಿಗೆ ಸನ್ಮಾನ ನಡೆಯುತ್ತಿರುವುದು ವಿಶೇಷ ಅಂಶವಾಗಿದೆ.

ಹಿಚ್ಕಡ ಗ್ರಾಮ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಹಲವು ಹೋರಾಟಗಾರರಿಗೆ ಸ್ಪೂರ್ತಿ ಮತ್ತು ಆಶ್ರಯ ನೀಡಿತ್ತು. ಪರಂಪರಾಗತವಾಗಿ ಇಲ್ಲಿನ ಧಾರ್ಮಿಕ ಕಾರ್ಯಗಳು ಯಾವುದೇ ಅಡೆತಡೆ ಇಲ್ಲದೆ ನಡೆದುಕೊಂಡು ಬಂದಿದೆ. ಗಣರಾಜ್ಯೋತ್ಸವದ ಅಂಗವಾಗಿ ಪ್ರತಿ ವರ್ಷವೂ ಹಿರಿಯರ ನೇತೃತ್ವದಲ್ಲಿ ಯಕ್ಷಗಾನ ಪ್ರದರ್ಶನ ಆಯೋಜನೆ ಮಾಡುತ್ತಿದ್ದೇವೆ. ಪೌರಾಣಿಕ ಐತಿಹಾಸಿಕ ಮತ್ತು ಸಾಮಾಜಿಕ ಕಳಕಳಿಯ ಸಂದೇಶವನ್ನು ಸಾರುವ ಯಕ್ಷಗಾನವನ್ನು ಪ್ರದರ್ಶಿಸಲಾಗುತ್ತಿದ್ದು, ಖ್ಯಾತ ಯಕ್ಷ ದಿಗ್ಗಜರು ಈ ವೇದಿಕೆಯಲ್ಲಿ ಪ್ರದರ್ಶನ ನೀಡಿದ್ದಾರೆ ಎಂದು ಗ್ರಾಮದ ಉಪನ್ಯಾಸಕರೊಬ್ಬರು 50ವರ್ಷಗಳ ಯಕ್ಷ ಕಲೆಯ ವಿವರಿಸಿದ್ದಾರೆ.

ಇದನ್ನು ಓದಿ :   ಮಹಾಸತಿಗೆ ಕೆಂಡದ ಭಕುತಿ ಪ್ರದರ್ಶಿಸಿದ ಭಕ್ತರು.

ವಿದ್ಯಾರ್ಥಿ ಬ್ಯಾಗ್ ನಲ್ಲಿ ದೇಶಿ ನಿರ್ಮಿತ ಬಾಂಬ್.

ಪ್ರಸಿದ್ಧ ಮಾಜಿ ಕ್ರಿಕೆಟಿಗನ ದಾಂಪತ್ಯದಲ್ಲಿ ಬಿರುಕು.

ಹೊನ್ನಾವರ ಗೋ ಕಳ್ಳತನ ಮಾಡುತ್ತಿದ್ದ ಮೂವರಿಗೆ ಹೆಡೆಮುರಿ ಕಟ್ಟಿದ ಪೊಲೀಸರ