ಸಿದ್ದಾಪುರ(SIDDAPURA) : ಅಡಿಕೆ(ARECNUT) ಕದ್ದು ಪರಾರಿಯಾಗಿದ್ದ ಇಬ್ಬರು ಖದೀಮರನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು(SIDDAPUR POLICE) ಯಶಸ್ವಿಯಾಗಿದ್ದಾರೆ .

ಬಿಳಗಿಯ ಅತ್ತಿರ ರಝಾ ನೂಮಾನ ತಂದೆ ರಫಿಕ್ ಸಾಬ್ (20) ಹಾಗೂ  ಆಲದಕಟ್ಟೆಯ ಇಮ್ರಾನ ಶೇಖ್ ತಂದೆ ಶೇಖ್ ಹುಸೇನ್‌ಸಾಬ್ (24) ಎಂಬುವವರನ್ನ ಬಂಧಿಸಲಾಗಿದೆ.

ಬಂಧಿತರಿಂದ ಕಳ್ಳತನ ಮಾಡಿದ ಒಟ್ಟೂ 4 ಕ್ವಿಂಟಲ್ ಚಾಲಿ ಅಡಿಕೆ ಅಂದಾಜು ಮೌಲ್ಯ 1,20,000/- ರೂ. ಹಾಗೂ ಕಳ್ಳತನ ಮಾಡಲು ಬಳಸಿದ ESTEEM ಕಾರು,  ಹಿರೋ ಸ್ಟೆಂಡರ್ ಮೋಟಾರ್ ಬೈಕ್   ವಶಪಡಿಸಿಕೊಳ್ಳಲಾಗಿದೆ.

ಸೆಪ್ಟೆಂಬರ್ 2ರಂದು ಇಟಗಿ ಗ್ರಾಮದ ಆಲದಕಟ್ಟೆಯ ಅಡಿಕೆ ವ್ಯಾಪಾರಿ ಮಹಮ್ಮದ್ ಶಫಿ  ಅಬ್ದುಲ್ ಅಜೀಂ ಸಾಬ್ ಎಂಬುವವರ ಮನೆಯ ಶೆಡ್ ನಲ್ಲಿದ್ದ ಅಡಿಕೆಯನ್ನು ಬೈಕ್ ನಲ್ಲಿ ಬಂದಿದ್ದ ಇಬ್ಬರು ಕಳ್ಳತನ ಮಾಡಿದ್ದರು. ಸುಮಾರು 60 ಕೆಜಿ ತೂಕದ ಚಾಲಿ ಅಡಿಕೆ ಚೀಲ 04,  ಸುಮಾರು 2 ಕ್ವಿಂಟಲ್ 40 ಕೆ.ಜಿ. ತೂಕ ಅಂದಾಜು ಮೊತ್ತ 72,000-00 ರೂಪಾಯಿ ಮೌಲ್ಯದ ಅಡಿಕೆ ಕಳ್ಳತನ ಮಾಡಿದ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆ(SIDDAPUR POLICE STATION)  ದೂರು ದಾಖಲಾಗಿತ್ತು.

ಇದನ್ನು ಓದಿ : ಮಾತು ಉಳಿಸಿಕೊಂಡ ಸಚಿವ ಮಂಕಾಳ್ ವೈದ್ಯ

ನಡು ರಸ್ತೆಯಲ್ಲಿ ಕಂಡಕ್ಟರ್ ಗಳ ಮಾರಾಮಾರಿ

ಉತ್ತರಕನ್ನಡ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಚೈತ್ರಾ ಮನವಿ

ಗಣೇಶ ಹಬ್ಬ ಈದ್ ಮಿಲಾದ್ ಗೆ ಕಟ್ಟುನಿಟ್ಟಿನ ಸೂಚನೆ