ಹೊನ್ನಾವರ(HONNAVAR) : ಮಂಕಿಯ ಹನುಮಂತ ದೇವಸ್ಥಾನದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ  ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ(VISHWESHWAR HEGADE KAGERI) ಚಾಲನೆ ನೀಡಿದರು.

ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಂಕಿ ಇದು ಭಟ್ಕಳ ಕ್ಷೇತ್ರದ ನಿರ್ಣಾಯಕ ಕ್ಷೇತ್ರ. ಭಟ್ಕಳ ಕೇಳಿದ್ರು ಮಂಕಿಯ ಬಗ್ಗೆ ಹೇಳುತ್ತಾರೆ ಗೇರುಸೊಪ್ಪ(GERUSOPPA) ಕೇಳಿದ್ರು ಮಂಕಿ(MANKI) ಅನ್ನುತ್ತಾರೆ.  ರಾಜಕೀಯ ಪಕ್ಷಗಳ ನಾಯಕರನ್ನು ನಿರ್ಣಾಯಕ ಹಂತದ ಮತಕ್ಕೆ ಕೊಂಡೊಯ್ಯುವ ಮತದಾರರು ಮಂಕಿಯ ಮತದಾರರು. ಕಳೆದ ಲೋಕಸಭಾ ಚುನಾವಣೆಯಲ್ಲಿ ತನ್ನನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿದ್ದಿರಿ ಎಂದು ಕಾರ್ಯಕರ್ತರಿಗೆ  ಧನ್ಯವಾದ ತಿಳಿಸಿದರು.

ಮಂಕಿಯ ರಾಮಕ್ಷತ್ರಿಯರು ಅಂದರೆ ತಮಗೆ ಸ್ವಲ್ಪ ಪ್ರೀತಿ ಹೆಚ್ಚು. ಯಾಕೆಂದರೆ ನಮ್ಮದು ಮತ್ತು ರಾಮಕ್ಷತ್ರಿಯ ಎರಡೂ ಸಮಾಜದ ಮಠ ಸ್ವರ್ಣವಲ್ಲಿ. ಹಾಗಾಗಿ ನಮಗೆ ಮತ್ತು ಅವರಿಗೆ ಅಲ್ಲಿ ಇಲ್ಲಿ ಭೇಟಿ ಆಗುತ್ತಾ ಇರುತ್ತದೆ ಅಂದರು.

ಮಂಕಿ ದೊಡ್ಡ ಊರು ಆಗಿರುವುದರಿಂದ ಅತೀ ಹೆಚ್ಚಿನ
ಜನರು ಬಾಜಪಾದ ಸದಸ್ಯತ್ವ(BJP MEMBERSHIP) ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಹಾಗೆಯೇ ಮಂಕಿಯ ಕಾರ್ಯಕರ್ತರು ಮಂಕಿ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ಮತ್ತು ಮಂಕಿ ಆಸ್ಸತ್ರೆಯ ಹತ್ತಿರ ರೋಡ್ ಲೈಟ್ ಬಗ್ಗೆ ಗಮನಕ್ಕೆ ತಂದಾಗ ತಾನೇ ಐಆರ್ ಬಿ(IRB) ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸುತ್ತೇನೆ. ತಮ್ಮ ಬೇಡಿಕೆಯನ್ನು ಈಡೇರಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.

ಪಕ್ಷದ ಹಿರಿಯ ಕಾರ್ಯಕರ್ತ ಉಮೇಶ್ ಖಾರ್ವಿ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ ಅವರ ಮನೆಯಿಂದಲೇ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ಸದಸ್ಯತ್ವ ಅಭಿಯಾನದ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಮಂಡಲದ ಅಧ್ಯಕ್ಷ ಮಂಜುನಾಥ್ ನಾಯ್ಕ ಮಾಜಿ ಶಾಸಕ ಸುನಿಲ್ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್ ನಾಯ್ಕ,  ಗಣಪತಿ ಗೌಡ,  ಓಬಿಸಿ ಕಾರ್ಯದರ್ಶಿ ಸುಬ್ರಾಯ ನಾಯ್ಕ,  ಜಿಲ್ಲಾ ಓಬಿಸಿ ಕಾರ್ಯದರ್ಶಿ ಆನಂದ ನಾಯ್ಕ ಮಂಕಿ, ವಿನೋದ್ ನಾಯ್ಕ ಕೇಶವ ನಾಯ್ಕ,   ಬಿ ಟಿ ನಾಯ್ಕ, ದೀಪಕ ನಾಯ್ಕ, ಸಿ ಎಸ್ ನಾಯ್ಕ ಉಪಸ್ಥಿತರಿದ್ದರು.

ಇದನ್ನು ಓದಿ : ವಿಜೃಂಭಣೆಯಿಂದ ಜರುಗಿದ ವಿಶ್ವಕರ್ಮ ಮಹೋತ್ಸವ

ಅಕ್ರಮ ನಾಟ ಸಾಗಾಟ ಇಬ್ಬರ ಬಂಧನ

ದಾಂಡೇಲಿಯಲ್ಲಿ ಸರಣಿ ಕಳ್ಳತನ

ಭಟ್ಕಳದಲ್ಲಿ ಪ್ಯಾಲೇಸ್ಟೆನ್ ಧ್ವಜ ತೆರವು.

HSRP ನಂಬರ್ ಪ್ಲೇಟ್ ಅಳವಡಿಸಲು ನವೆಂಬರ್ 20 ಗಡವು.