ಭಟ್ಕಳ(Bhatkal)  :  ಬೈಕ್ ಕದ್ದು ಪರಾರಿಯಾಗಿದ್ದ ವ್ಯಕ್ತಿಯೋರ್ವ ಕೆಲ ಗಂಟೆಗಳ ನಂತರ ಮತ್ತೆ ಅದೇ ಸ್ಥಳದಲ್ಲಿ ಕದ್ದ ಬೈಕ್ (Theft Bike) ಬಿಟ್ಟು ಹೋದ ಘಟನೆ  ಶಹರದ ಸಂಶುದ್ದಿನ್ ಸರ್ಕಲ್(Samshuddin Circle) ಬಳಿ ನಡೆದಿದೆ

ಇಲ್ಲಿನ ಭಾರತ್ ಪೆಟ್ರೋಲ್ ಪಂಪ್(Bharat Petrol Pump) ಸಮೀಪ  ಈ ಘಟನೆ ನಡೆದಿದ್ದು, ಕಳ್ಳತನದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಭಟ್ಕಳ ತಾಲೂಕಿನ ಬೆಳ್ಳಿ(Belni) ನಿವಾಸಿ ಮಂಜುನಾಥ ಹೆಮ್ಮಯ್ಯ ನಾಯ್ಕ ಅವರಿಗೆ ಸೇರಿದ ಬೈಕ್ ಇದಾಗಿದೆ. ಇವರು ಮಂಗಳವಾರ ಬೆಳಿಗ್ಗೆ ಹನ್ನೊಂದುವರೆ ಸುಮಾರಿಗೆ ಇಲ್ಲಿನ ಶಂಸುದ್ದಿನ್ ಸರ್ಕಲ್ ಸಮೀಪವಿರುವ ಭಾರತ್ ಪೆಟ್ರೋಲ್ ಪಂಪ್ ತನ್ನ ಬೈಕ್ ನಿಲ್ಲಿಸಿದ್ದರು. ಬಳಿಕ ಕೆಲಸದ ನಿಮಿತ್ತ ಹೋಗಿದ್ದರು. ವಾಪಾಸ್ ಬರುವಷ್ಟರಲ್ಲಿ ಬೈಕ್‌ ನಾಪತ್ತೆಯಾಗಿತ್ತು.

  ಕಳ್ಳ ಮೊದಲು ಬೈಕ್‌ ಸಮೀಪ ಬಂದವನು ಕೀ ಹಾಕಿರುವುದನ್ನು ಗಮನಿಸಿದ್ದಾನೆ. ಕೆಲ ಕಾಲ ಬೈಕ್ ಸಮೀಪ ತನ್ನ ಕೈಚಳಕ ತೋರಿದ್ದಾನೆ. ಬಳಿಕ ಅಲ್ಲಿಂದ ತೆರಳಿದ ಆತ ತಾನು ತಂದಿರುವ ಬೈಕನ್ನು ಪೆಟ್ರೋಲ್ ಪಂಪ್ ಮುಂದೆ ಪಾರ್ಕಿಂಗ್ ಮಾಡಿ ಪುನಃ ಈ ಬೈಕ್‌ ಸಮೀಪ ಬಂದು ಬೈಕ್ ಕದ್ದು ಪರಾರಿಯಾಗಿದ್ದಾನೆ. ಸ್ವಲ್ಪ ಸಮಯದ ನಂತರ ಮಂಜುನಾಥ ಬಂದು ನೋಡಿದಾಗ, ಬೈಕ್‌  ಇರಲಿಲ್ಲ.  ಅಲ್ಲಿದ್ದವರ  ಬಳಿ ವಿಚಾರಿಸಿದರೂ ಯಾವುದೇ ಮಾಹಿತಿ ತಿಳಿಯದೆ ಇರುವುದರಿಂದ ನಾಪತ್ತೆಯಾಗಿರುವುದು ಗೊತ್ತಾಯಿತು.

ಪೆಟ್ರೋಲ್ ಪಂಪ್ ನಲ್ಲಿರುವ ಸಿಸಿಟಿವಿ (CCTV) ಪರಿಶೀಲನೆ ಮಾಡಿದಾಗ ಬೈಕ್ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಸಿಸಿಟಿವಿಯಲ್ಲಿ ಕಳ್ಳ ತಂದಿದ್ದ ಬೈಕ್ ಪೆಟ್ರೋಲ್‌ ಪಂಪ್ ಮುಂಭಾಗದಲ್ಲಿ ಪಾರ್ಕಿಂಗ್ ಮಾಡಿರುವುದೂ ಸೆರೆಯಾಗಿದೆ. ಆ ಬೈಕ್ ನೋಡಲು ಹೋದಾಗ ಅಷ್ಟರಲ್ಲಾಗಲೇ ಆ ಬೈಕ್ ಕೂಡ ಅಲ್ಲಿಂದ ಸಾಗಿಸಲಾಗಿತ್ತು. ಅದು ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಚಿತ್ರವೆಂದರೆ, ಕೆಲ ಗಂಟೆಗಳ ನಂತರ ಸಂಜೆ ಹೊತ್ತು ಕದ್ದ ಬೈಕನ್ನು ಅದೇ ವ್ಯಕ್ತಿ ಮತ್ತೆ ಅದೇ ಜಾಗದಲ್ಲಿ ತಂದಿಟ್ಟಿದ್ದಾನೆ. ಕಳ್ಳ ಹೆದರಿ ವಾಪಾಸ್ ತಂದು ಇಟ್ಟಿರುವ ಶಂಕೆಯಿದೆ. ತನ್ನ ಬೈಕ್ ಸಿಕ್ಕಿದ್ದರಿಂದ ಮಾಲೀಕ ನಿಟ್ಟುಸಿರು ಬಿಟ್ಟಿದ್ದಾನೆ.

ಇದನ್ನು ಓದಿ : ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ. ನಾಲ್ವರ ದುರ್ಮರಣ.

ಹ್ಯಾಟ್ರಿಕ್ ಹೀರೋ ಶಿವರಾಜಕುಮಾರಗೆ ಸತತ ಆರು ಗಂಟೆ ವೈದ್ಯರಿಂದ ಆಪರೇಷನ್.

ಮಾರಿ ಹೊರೆಯ ಗೊಂಬೆ ನಾಪತ್ತೆ ಆರೋಪ. ಗೊಂದಲದ ವಾತಾವರಣ.

ಕಾರಾಗೃಹದ ಎದುರು ಡ್ರೋನ್ ಪ್ರತಾಪ್ ಕಣ್ಣೀರು