ಇ ಸಮಾಚಾರ ಡಿಜಿಟಲ್ಷಿಂ ನ್ಯೂಸ್ (esamachara digital news) ವಾಷಿಂಗ್ಟನ್ (Washington) :

ಹ್ಯಾಟ್ರಿಕ್ ಹೀರೋ(ಹ್ಯಾಟ್ರಿಕ್ Hero) ಶಿವರಾಜಕುಮಾರ್‌ (Shivarajkumar) ಅವರಿಗೆ ಫ್ಲೋರಿಡಾದ ಮಿಯಾಮಿ ಕ್ಯಾನ್ಸರ್ ಇನ್ಸಿಟ್ಯೂಟ್‌ನಲ್ಲಿ ಸತತ ಅರು ಗಂಟೆಗಳ ಕಾಲ ತಜ್ಞ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ  ಮಾಡಿದ್ದಾರೆ.

ಭಾರತೀಯ ಮೂಲದ(India Native) ತಜ್ಞ ವೈದ್ಯ ಡಾ. ಮುರುಗೇಶ್ ನೇತೃತ್ವದಲ್ಲಿ ಮಿಯಾಮಿ ಆಸ್ಪತ್ರೆಯಲ್ಲಿ ಶಿವಣ್ಣನಿಗೆ ಆಪರೇಷನ್ ಮಾಡಲಾಗಿದೆ. ಭಾರತೀಯ ಕಾಲಮಾನ ಮಂಗಳವಾರ ರಾತ್ರಿ 11:30ರ ಸುಮಾರಿಗೆ ಶಸ್ತ್ರಚಿಕಿತ್ಸೆ ಮುಗಿದಿದೆ ಎಂದು ತಿಳಿದುಬಂದಿದೆ. ಅಮೆರಿಕದ(America) ಕಾಲಮಾನ ಬೆಳಗ್ಗೆ 8 ಗಂಟೆಗೆ ಅಂದರೆ ಭಾರತೀಯ ಕಾಲಮಾನದ ಪ್ರಕಾರ 6 ಗಂಟೆಗೆ ಆಪರೇಷನ್ ಥಿಯೇಟರ್‌ಗೆ ಶಿವಣ್ಣರನ್ನು ಕರೆದುಕೊಂಡು ಹೋಗಲಾಗಿತ್ತು.

ಆಸ್ಪತ್ರೆಯಲ್ಲಿ ಶಿವಣ್ಣನೊಂದಿಗೆ ಪತ್ನಿ ಗೀತಾ, ಪುತ್ರಿ ನಿವೇದಿತಾ, ಬಾಮೈದ ಮಧು ಬಂಗಾರಪ್ಪ(Madhu Bangarappa) ಜೊತೆಗಿದ್ದಾರೆ. ಕ್ಯಾನ್ಸರ್ (Cancer) ಚಿಕಿತ್ಸೆಗೆ ಸಂಬಂಧಿಸಿ ಶಿವಣ್ಣ ಅವರಿಗೆ  ಆಸ್ಪತ್ರೆಯಲ್ಲೇ ಇನ್ನೊಂದು ವಾರ ಚಿಕಿತ್ಸೆ ಮುಂದುವರೆಯಲಿದೆ. ಅಲ್ಲಿಯವರೆಗೆ ನುರಿತ ವೈದ್ಯರ ನಿಗಾದಲ್ಲಿ ಶಿವಣ್ಣ ಇರಲಿದ್ದಾರೆ. ಅಲ್ಲಿಯವರೆಗೆ ಅಮೆರಿಕದಲ್ಲೇ ಇರುವ ಶಿವರಾಜಕುಮಾರ್ (Shivarajkumar) ಜನವರಿ 26ರಂದು ಭಾರತಕ್ಕೆ ಮರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನೆಚ್ಚಿನ ನಟ ಬೇಗ ಗುಣಮುಖರಾಗಿ ಬರಲಿ ಎಂದು ರಾಜ್ಯದ ನಾನಾ ಭಾಗಗಳಲ್ಲಿ ಅಭಿಮಾನಿಗಳು ದೇವಸ್ಥಾನಗಳಲ್ಲಿ ಹೋಮ- ಹವನಗಳನ್ನು ನಡೆಸಿ ಪ್ರಾರ್ಥಿಸಿದ್ದಾರೆ.

ಇದನ್ನು ಓದಿ : ಕಾರಾಗೃಹದ ಎದುರು ಡ್ರೋನ್ ಪ್ರತಾಪ್ ಕಣ್ಣೀರು

ಮಾರಿ ಹೊರೆಯ ಗೊಂಬೆ ನಾಪತ್ತೆ ಆರೋಪ. ಗೊಂದಲದ ವಾತಾವರಣ.

ನಸುಕಿನ ಜಾವ ಸಕ್ಕರೆ ತುಂಬಿದ ಲಾರಿಗೆ ಬೆಂಕಿ.

ಮೈ, ಕೈ ಕಾಲುಗಳಲ್ಲಿ ಮದ್ಯ ಸಾಗಾಟ. ಇಬ್ಬರ ಬಂಧನ