ಅಂಕೋಲಾ(Ankola) : ಪೊಲೀಸ್ ಹವಾಲ್ದಾರ್(Police Havaldar) ಓರ್ವರು ಕರ್ತವ್ಯದಲ್ಲಿರುವಾಗಲೇ ಹಠಾತ್ ಆರೋಗ್ಯ ಸಮಸ್ಯೆ ಉಂಟಾಗಿ ಮೃತಪಟ್ಟಿದ್ದಾರೆ.
ಕಾರವಾರದ ಹಬ್ಬುವಾಡ(Karwar Habbuwada) ಮೂಲದ ನಿತ್ಯಾನಂದ ಕಿಂದಳ್ಕರ್ ಮೃತ ದುರ್ದೈವಿಯಾಗಿದ್ದಾರೆ. ಸೋಮವಾರ ಮಧ್ಯೆ ರಾತ್ರಿ ನಿತ್ಯಾನಂದ ಅಂಕೋಲಾದಲ್ಲಿ(Ankola) ಡ್ಯೂಟಿಯಲ್ಲಿದ್ದರು. ಮಂಗಳವಾರ ಮಧ್ಯಾಹ್ನ ಸುಮಾರಿಗೆ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
1997ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದ ನಿತ್ಯಾನಂದ ಕಳೆದ 2 ವರ್ಷಗಳಿಂದ ಅಂಕೋಲಾ ಪೊಲೀಸ್ ಠಾಣೆಯಲ್ಲಿ(Ankola Police Station) ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ಓರ್ವ ಪುತ್ರಿ ಹಾಗೂ ಪತ್ನಿಯನ್ನು ಅಗಲಿದ್ದಾರೆ.
ಹವಾಲ್ದಾರ್ ನಿತ್ಯಾನಂದ(Havaldar nityananda) ಅವರ ಸಾವಿಗೆ ಅಂಕೋಲಾ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ್ ಮಠಪತಿ. ಪಿಎಸ್ಐ ಉದ್ದಪ್ಪ. ಸೇರಿದಂತೆ ಅಧಿಕಾರಿ ಸಿಬ್ಬಂದಿ ವರ್ಗದವರು ಸಂತಾಪ ಸೂಚಿಸಿದ್ದಾರೆ.
ಇದನ್ನು ಓದಿ : ಅಯ್ಯಪ್ಪ ಭಕ್ತರ ಮೇಲೆ ಕಾರು ಹರಿಸಿದ ಚಾಲಕ. ಆಕ್ರೋಶಕ್ಕೆ ಕಾರಿನ ಗಾಜು ಪುಡಿಪುಡಿ.
ಭಕ್ತ ಸಾಗರ ನಡುವೆ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ಜಾತ್ರಾ ಮಹೋತ್ಸವಕ್ಕೆ ಚಾಲನೆ.