ಕಾರವಾರ(KARWAR) : ತಾಲೂಕಿನ ಮುದಗಾ ಗ್ರಾಮದ(MUDAGA VILLAGE) ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು (CAR) ಮತ್ತು  ಟ್ಯಾಂಕ‌ರ್(TANKER) ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ನಡೆದಿದೆ.

ಘಟನೆಯಲ್ಲಿ ಮೂವರು ಗಂಭೀರ ಗಾಯಗೊಂಡಿದ್ದಾರೆ. ಕಾರು ಕಾರವಾರ ಕಡೆಯಿಂದ ಅಂಕೋಲಾ(ANKOLA) ಕಡೆ ತೆರಳುತಿತ್ತು. ಟ್ಯಾಂಕರ್ ವಾಹನ ಅಂಕೋಲಾ ಕಡೆಯಿಂದ ಕಾರವಾರ ಕಡೆ ಸಂಚರಿಸುತಿತ್ತು. ಕಾರಿನಲ್ಲಿ ಎರಡು ಕುಟುಂಬದ ಎಂಟು ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತ ನಡೆದಾಕ್ಷಣ ಕಾರಿನ ಏರ್ ಬ್ಯಾಗ್‌(AIRBAGS) ತೆರೆದುಕೊಂಡಿದ್ದರಿಂದ   ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರು ಗೋವಾದ್ದಾಗಿದ್ದು(GOA) ಹಾಗೂ ತಮಿಳುನಾಡು(TAMILUNADU) ಟ್ಯಾಂಕರ್‌ ಆಗಿದೆ. ಘಟನೆಯಲ್ಲಿ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.  ಸ್ಥಳಕ್ಕೆ ಸ್ಥಳೀಯ ಗ್ರಾಮೀಣ ಠಾಣೆ ಪೊಲೀಸರು(RURAL POLICE STATION) ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಅವೈಜ್ಞಾನಿಕವಾಗಿರುವ ಹೆದ್ದಾರಿ ಕಾಮಗಾರಿಯಿಂದಾಗಿ ಈ ಅವಘಢ ನಡೆದಿದೆ ಎಂದು ಸ್ಥಳೀಯರು ಐಆರ್‌ಬಿ(IRB) ವಿರುದ್ಧ  ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ : ಬ್ಲಾಕ್ ಮೆಲ್ ಉದ್ಯಮಿ ಆತ್ಮ*ತ್ಯೆ

ಮುರ್ಡೇಶ್ವರ ಬೀಚ್ ಬಂದ್ ಮಾಡಿದ ಅಧಿಕಾರಿಗಳು

ಗೋವಾ ಪೊಲೀಸರ ಕಾರ್ಯಾಚರಣೆ

ಸಿಕ್ಕಿ ಬಿದ್ದ ಅರ್ಚಕ