ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹೊನ್ನಾವರ(Honnavar) : ತಾಲೂಕಿನ ಇಡಗುಂಜಿ(Idagungi) ಸಮೀಪದ ಕುಳಿಮನೆ ಶಾಂತಿನಗರದಲ್ಲಿ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಬಂಗಾರ ನಗದು ದೋಚಿದ ಘಟನೆ ನಡೆದಿದೆ.
ಮನೆಯೊಳಗೆ ನುಗ್ಗಿದ ಕಳ್ಳರು(Thieves) ಗೋದ್ರೇಜ್ ಕಪಾಟು ಒಡೆದು ₹4.80 ಲಕ್ಷ ಮೌಲ್ಯದ ಚಿನ್ನಾಭರಣ(Gold Ornaments) ಹಾಗೂ ₹10 ಸಾವಿರ ನಗದು ಕಳವು ಮಾಡಿದ್ದಾರೆ. ಈ ಬಗ್ಗೆ ಶಿಕ್ಷಕಿ ಸಂಧ್ಯಾ ಕೋಂ ಗುರುದತ್ತ ಶೇಟ್ಎಂಬುವವರು ಮಂಕಿ ಪೊಲೀಸ್ ಠಾಣೆಯಲ್ಲಿ(Manki Police Station) ಪ್ರಕರಣ ದಾಖಲಿಸಿದ್ದಾರೆ.
ಆಗಸ್ಟ್ 11ರಂದು ಬೆಳಗ್ಗೆ 9:45 ರಿಂದ ಮಧ್ಯಾಹ್ನ 1:00 ಗಂಟೆಯ ನಡುವಿನ ಅವಧಿಯಲ್ಲಿ ಕಳ್ಳತನ ನಡೆದಿದೆ ಎನ್ನಲಾಗಿದೆ. ಕಳ್ಳರು ಗೋದ್ರೇಜ್ ಕಪಾಟನ್ನು ತೆಗೆದು, ಅದರ ಲಾಕರ್ ಅನ್ನು ಕಬ್ಬಿಣದ ಕತ್ತಿಯಂತಹ ಆಯುಧದಿಂದ ಮೀಟಿ ತೆರೆದಿದ್ದಾರೆ. ಬಳಿಕ ಲಾಕರ್‌ನಲ್ಲಿದ್ದ ಸುಮಾರು ₹4,80,000 ಮೌಲ್ಯದ ಬಂಗಾರದ ಆಭರಣಗಳು(Gold Ornaments) ಹಾಗೂ ₹10,000 ನಗದನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.
ಮನೆಯಿಂದ ಚಿನ್ನಾಭರಣ ಹಾಗೂ ಹಣ ಕಳವಾಗಿರುವುದು ಗಮನಕ್ಕೆ ಬಂದ ಬಳಿಕ ಸಂಧ್ಯಾ ಅವರು ಮಂಕಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಕಳುವಾದ ಚಿನ್ನಾಭರಣ ಹಾಗೂ ಹಣವನ್ನು ಪತ್ತೆಹಚ್ಚಿ, ಕೃತ್ಯ ಎಸಗಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಈ ಬಗ್ಹೆ ಮಂಕಿ(Manki) ಪೊಲೀಸ್ ಠಾಣೆಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
