ಶಿರಸಿ(SIRSI): ತಾಲೂಕಿನ ಬದನಗೋಡ ಗ್ರಾಪಂ (Badanagodu) ವ್ಯಾಪ್ತಿಯ ರಂಗಾಪುರ(ಬಿಡಿಬೈಲ್) (Rangapura)ಬಳಿ ನಿರ್ಮಾಣವಾಗಲಿರುವ ಟೋಲ್ ಪ್ಲಾಜಾವನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ, ಗ್ರಾಮಸ್ಥರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ(Mp VVishweshwar Hegade Kageri) ಭೇಟಿಯಾಗಿ ಮನವಿ ಸಲ್ಲಿಸಿದರು.
ರಂಗಾಪುರ(ಬಿಡಿಬೈಲ್) ಬಳಿ ಜನವಸತಿ ಪ್ರದೇಶದಲ್ಲಿ (ಕುಮಟಾ-ಶಿರಸಿ-ಎಕ್ಕಂಬಿ-ಹಾವೇರಿ ರಾಷ್ಟ್ರ ಹೆದ್ದಾರಿ) ಸುಂಕ ವಸೂಲಾತಿ ಕೇಂದ್ರ ನಿರ್ಮಾಣ ಮಾಡಲಾಗುವುದು ಎಂದು ಸೂಚಿಸಿರುವ ಸರ್ವೆ ನಂಬರ್‌ಗಳಲ್ಲಿನ (19ಕುಟುಂಬ) ಜನರು ತಮ್ಮ ಮನೆಗಳನ್ನು ಹಾಗೂ ಹೊಂದಿರುವ ಸಣ್ಣ ಪ್ರಮಾಣದ ಕೃಷಿ ಜಮೀನುಗಳನ್ನು ಕಳೆದುಕೊಂಡು ತಮ್ಮ ಕುಟುಂಬಗಳೊಂದಿಗೆ ಬೀದಿ ಪಾಲಾಗುವ ಭಯ ಎದುರಾಗಿದೆ. ಈಗಾಗಲೇ ಶಿರಸಿ ಹತ್ತಿರ ಹನುಮಂತಿ ಗ್ರಾಮದಲ್ಲಿ (Hanumanti Village) ರಾಷ್ಟ್ರ ಹೆದ್ದಾರಿ 766ಇ ಇದರ ಟೋಲ್ ಪ್ಲಾಜಾ(Toll Plaza) ನಿರ್ಮಿಸುತ್ತಿದ್ದು ಅಲ್ಲಿಂದ ಕೇವಲ 33ಕಿ.ಮೀ ಅಂತರದಲ್ಲಿ ಬದನಗೋಡ ಗ್ರಾಮ ಪಂಚಾಯತ ವ್ಯಾಪ್ತಿಯ ರಂಗಾಪುರ(ಬಿಡಿಬೈಲ್)ನ) ಟೋಲ್ ಪ್ಲಾಜಾವನ್ನು ನಿರ್ಮಿಸುವುದಾಗಿ ನೋಟಿಸ್ ನೀಡಲಾಗಿದೆ. ಇದು ಶುಲ್ಕ ನಿಯಮಗಳು 2008ರ ಪ್ರಕಾರ ಎರಡು ಪಕ್ಕದ ಟೋಲ್ ಪ್ಲಾಜಾಗಳ ನಡುವಿನ ಅಂತರವು 60ಕಿಮೀ ಆಗಿರಬೇಕು. ಆದ್ದರಿಂದ ನಿಯಮದ ಉಲ್ಲಂಘನೆಯಾಗಿರುವುದು ಕಂಡುಬಂದಿದೆ.
ಈ ಮೊದಲು ರಸ್ತೆಯ ಎರಡು ಬದಿಯ 45ಪೂಟ್ ಜಾಗವನ್ನು ಟೋಲ್ ಪ್ಲಾಜಾ ನಿರ್ಮಿಸಲು ಭೂಸ್ವಾಧೀನ ಮಾಡುವುದಾಗಿ ಪ್ರಕಟಿಸಿ ಈಗ ಕೇವಲ ರಸ್ತೆಯ ಒಂದು ಬದಿಯ ಮನೆಗಳು ಇರುವ ಹಾಗೂ ಹೊಸದಾಗಿ ಬೆಳೆ ಬರುತ್ತಿರುವ ಸಣ್ಣ ರೈತರ ಜಮೀನುಗಳನ್ನು ಭೂಸ್ವಾಧೀನ ಮಾಡುವುದಾಗಿ ಭೂಮಾಲಿಕರಿಗೆ ನೇರವಾಗಿ ನೋಟಿಸ್ ನೀಡಲಾಗಿದೆ. ರಸ್ತೆಯ ಮತ್ತೊಂದು ಬದಿಯಲ್ಲಿ ಹಾನಿಗೊಳಗಾಗುವ ಯಾವುದೇ ಮನೆಗಳಿಲ್ಲ ಮತ್ತು ಹೊಸದಾಗಿ ಫಲ ಬರುತ್ತಿರುವ ತೋಟಗಳಿಲ್ಲ. ಹೆಚ್ಚಿನ ಹಾನಿಯಾಗುವ ಭೂಮಿಯನ್ನೇ ಅಂದರೆ ಚಿಕ್ಕ ಕೃಷಿಕರು, ಗುಂಟೆ ಲೆಕ್ಕದಲ್ಲಿ ಭೂಮಿ ಹೊಂದಿರುವ ಕೂಲಿ ಕಾರ್ಮಿಕರನ್ನೇ ಗುರಿಯಾಗಿಸಿ ಟೋಲ್ ಪ್ಲಾಜಾ ನಿರ್ಮಿಸುತ್ತಿರುವುದು ನೇರವಾಗಿ ಗೋಚರಿಸುತ್ತದೆ ಎಂದು ತಿಳಿಸಿದ್ದಾರೆ.
ಟೋಲ್ ಪ್ಲಾಜಾವನ್ನು ನಮ್ಮ ಗ್ರಾಮದಿಂದ ಶಿರಸಿ (SIRSI) ಹೋಗುವ ರಸ್ತೆಯಲ್ಲಿ ಹಾಗೂ ಹಾವೇರಿ ಹೋಗುವ ರಸ್ತೆಯಲ್ಲಿ ಯಥೇಚ್ಚವಾದ ಸರಕಾರಿ ಜಮೀನುಗಳಿದ್ದು (ಪಡ) ಅವುಗಳು ಜನವಸತಿ ಇಲ್ಲದೆ ಇರುವ ಪ್ರದೇಶವಾಗಿದೆ ಹಾಗೂ ಯಾವುದೇ ಪರಿಸರ ಹಾನಿಯಾಗದೇ ಟೋಲ್ ಪ್ಲಾಜಾ ನಿರ್ಮಿಸಬಹುದಾದ ಅಗಲವಾದ ಜಾಗ ಕೂಡ ಲಭ್ಯವಿದೆ (ಹಾನಗಲ್ ತಾಲೂಕ ಹನುಮನಕೊಪ್ಪ, ಬಾಳೆಹಳ್ಳಿ, ಸಮ್ಮಸಗಿಯಿಂದ ನಾಲ್ಕೂರ್ ಕ್ರಾಸವರೆಗೆ ಸುಮಾರು 15ಕಿಮೀ ಅಂತರದವರೆಗೆ) ಯಥೇಚ್ಚವಾದ ಸರ್ಕಾರಿ ಜಮೀನು ಇದೆ. ಈ ಜಾಗವನ್ನು ಟೋಲ್ ಪ್ಲಾಜಾ ನಿರ್ಮಿಸಲು ಪರಿಗಣಿಸಬಹುದಾಗಿದೆ. ಟೋಲ್ ಪ್ಲಾಜಾ ನಿರ್ಮಿಸಲು ನಿರ್ಣಯಿಸಿರುವ ಭೂ ಮಾಲಿಕರೆಲ್ಲರೂ ಚಿಕ್ಕ ಹಾಗೂ ಅತಿ ಚಿಕ್ಕ ಹಿಡುವಳಿದಾರರಿದ್ದು ಈ ಜಮೀನುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಜಮೀನನ್ನು ಹೊಂದಿರುವುದಿಲ್ಲ. ಇದೇ ಜಮೀನುಗಳನ್ನು ಅವಲಂಬಿಸಿ, ಜೀವನ ನಡೆಸುತ್ತಿದ್ದಾರೆ. ಈ ವಿಷಯಗಳನ್ನು ಪರಿಗಣಿಸಿ ಟೋಲ್ ಪ್ಲಾಜಾವನ್ನು ಸ್ಥಳಾಂತರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸಲ್ಲಿಸುವ ವೇಳೆ ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ, ಗ್ರಾಪಂ ಮಾಜಿ ಸದಸ್ಯ ಜಯಪುತ್ರ, ಪ್ರಮುಖರಾದ , ಪ್ರಭು ಕ್ಯಾತಣ್ಣವರ್, ಪ್ರಜ್ವಲ್ ಸೇರಿದಂತೆ ಮತ್ತಿತರರು ಇದ್ದರು.
ಇದನ್ನು ಓದಿ : ಸಂಚಾರಿ ಪೊಲೀಸ್ ಠಾಣೆ ಜಾಗ ಪರಿಶೀಲಿಸಿದ IGP ಅಮಿತ್ ಸಿಂಗ್
ಶಿರಸಿಯಲ್ಲಿ ಅದ್ದೂರಿಯಾಗಿ ಜರುಗಿದ ಧರ್ಮ ಸಮ್ಮೇಳನ
ಕುಮಟಾದ ತೇಜಸ್ವಿನಿ ವೇರ್ಣೇಕರ್ ಗೆ ರಾಷ್ಟ್ರ ಮಟ್ಟದ ಸಂಗೀತ ಪ್ರಶಸ್ತಿ